ಬೆಂಗಳೂರು: ಇಂದು ವಿಶ್ವ ಅಪ್ಪಂದಿರ ದಿನ. ಈ ಹಿನ್ನೆಲೆಯಲ್ಲಿ ಪೊಲೀಸ್ ಕಸ್ಟಡಿಯಲ್ಲಿರುವ ತಮ್ಮ ತಂದೆ ದರ್ಶನ್ ನನ್ನು ನೆನೆದಿರುವ ಪುತ್ರ ವಿನೀಶ್ ಭಾವುಕ ಪೋಸ್ಟ್ ಮಾಡಿದ್ದಾರೆ.
ಇನ್ಸ್ಟಾಗ್ರಾಂನಲ್ಲಿ ದರ್ಶನ್ ಮತ್ತು ತಾಯಿ ವಿಜಯಲಕ್ಷ್ಮೀ ಜೊತೆಗಿನ ಫೋಟೋವನ್ನು ವಿನೀಶ್ ಹಂಚಿಕೊಂಡು, ಶುಭಾಶಯ ಕೋರಿದ್ದಾರೆ.
ನಿಮ್ಮನ್ನ ನಾನು ಮಿಸ್ ಮಾಡಿಕೊಳುತ್ತಿದ್ದೇನೆ. ನಿಮ್ಮನ್ನ ನಾನು ಅಪಾರವಾಗಿ ಪ್ರೀತಿಸುತ್ತಿದ್ದೇನೆ. ಯಾವತ್ತಿಗೂ ನೀವೇ ನನ್ನ ಹೀರೋ ಅಪ್ಪ’ ಎಂದು ವಿನೀಶ್ ಬರೆದಿದ್ದಾರೆ.
ಸದ್ಯ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಆ್ಯಂಡ್ ಗ್ಯಾಂಗ್ ಅರೆಸ್ಟ್ ಆಗಿದೆ. ನಿನ್ನೆ ಕೋರ್ಟ್ಗೆ ದರ್ಶನ್ ಅವರನ್ನು ಹಾಜರುಪಡಿಸಲಾಗಿತ್ತು. ಆದರೆ ಕೋರ್ಟ್ ಮತ್ತೆ 5 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿದೆ.
+ There are no comments
Add yours