Drone Prathap in Bigg Boss : ಬಿಗ್ ಬಾಸ್ ಕನ್ನಡ ಸೀಸನ್ 10 ದಿನ ಕಳೆದಂತೆ ಜನರ ಕುತೂಹಲ ಹೆಚ್ಚಿಸುತ್ತಿದೆ. ಕಿಚ್ಚನ ಪಂಚಾಯ್ತಿ ಕೂಡ ಈ ಸಲ ವಿಭಿನ್ನಬಾಗಿ ಮೂಡಿಬರುತ್ತಿದೆ. ಮನೆ ಮಂದಿ ಸಹ ಎಲ್ಲದರಲ್ಲೂ ಸಖತ್ ಆಕ್ಟೀವ್ ಆಗಿರುವ ಕಾರಣ ಸಿಕ್ಕಾಪಟ್ಟೆ ಇಂಟರೆಸ್ಟಿಂಗ್ ಆಗಿದೆ. ಬಿಗ್ ಬಾಸ್ ಮನೆಯಲ್ಲಿ ನಗು, ಅಳು, ಜಗಳ ಎಲ್ಲದರ ಮಿಶ್ರಣ ಈ ಬಾರಿ ಸಿಗುತ್ತಿದೆ.
ಪ್ರತಿ ವಾರವೂ ನಾಮಿನೇಷನ್ ಪ್ರಕ್ರಿಯೆ ಒಂದೊಂದು ರೀತಿಯಲ್ಲಿ ನಡೆಯುತ್ತಿದೆ. ಅಂತೆಯೇ ಈ ವಾರವೂ ನಾಮಿನೇಷನ್ ವಿಭಿನ್ನವಾಗಿ ನಡೆದಿದೆ. ಈ ವಾರ ನಾಮಿನೇಷನ್ ಮಾಡುವ ಅಧಿಕಾರ ಪಡೆಯಲು ಸ್ಪರ್ಧಿಗಳಿಗೆ ಟಾಸ್ಕ್ ಒಂದನ್ನು ನೀಡಲಾಗಿತ್ತು.
ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳು ಎದ್ದೇಳುತ್ತಿದ್ದಂತೆ ಮನೆ ತುಂಬಾ ಬಲೂನ್‌ಗಳನ್ನು ಹಾಕಲಾಗಿತ್ತು. ಇದರಲ್ಲಿ ಕೆಲವು ಬಲೂನ್‌ನಲ್ಲಿ ನಾಮಿನೇಷನ್ ಪಾಸ್ ಇರಿಸಲಾಗಿತ್ತು. ಈ ನಾಮಿನೇಷನ್ ಪಾಸ್ ಅನ್ನು ಪಡೆದವರು ನಾಮಿನೇಟ್ ಮಾಡುವ ಅಧಿಕಾರ ಪಡೆಯುತ್ತಾರೆ ಎಂದು ಬಿಗ್ ಬಾಸ್ ಹೇಳಿದ್ದರು.
ಈ ಟಾಸ್ಕ್‌ನಲ್ಲಿ ಡ್ರೋನ್ ಪ್ರತಾಪ್ ಚಾಲಾಕಿತನ ತೋರಿದರು. ತಾವೆಷ್ಟು ಚಾಲಾಕಿ ಎಂದು ಪ್ರತಾಪ್ ಕೊನೆಗೂ ಪ್ರೂವ್ ಮಾಡಿದರು. ಪ್ರತಾಪ್ ಮೊದಲು ಪಾಸ್‌ಗಳನ್ನು ಹುಡುಕಿದರು. ಇಡೀ ಮನೆಯಲ್ಲೇ ಡ್ರೋನ್ ಪ್ರತಾಪ್ ಮಾತ್ರ ನಾಮಿನೇಷನ್ ಪಾಸ್‌ಗಳನ್ನು ಹುಡುಕಿದ್ದರು.
ಪ್ರತಾಪ್ ಬಳಿ ಒಂದು ಪಾಸ್ ಇದೆ ಎಂದು ತಿಳಿದ ಕಾರ್ತಿಕ್, ಅದನ್ನು ಕಸಿದುಕೊಳ್ಳಲು ಮುಂದಾದರು. ಪ್ರತಾಪ್ ಮೈಮೇಲೆ ಬಿದ್ದು ಕಾರ್ತಿಕ್ ಬಲವಂತವಾಗಿ ಪಾಸ್ ಕಸಿದುಕೊಳ್ಳಲು ಪ್ರಯತ್ನಿಸಿದರು. ಪ್ರತಾಪ್ ಜೊತೆ ಯುದ್ಧಕ್ಕೆ ನಿಂತವರಂತೆ ಹೋರಾಡಿದರು. ಅವರಿಗೆ ಮೈಕೆಲ್ ಮತ್ತು ಸ್ನೇಹಿತ್ ಸಹಾಯ ಮಾಡಿದರು. ಕಾರ್ತಿಕ್ ಮಹೇಶ್ ಪಾಸ್ ಕಸಿದುಕೊಳ್ಳುವಲ್ಲಿ ಯಶಸ್ವಿಯಾದರು.
ಡ್ರೋನ್ ಪ್ರತಾಪ್ ನಿಜಕ್ಕೂ ಬೇಸರವಾದಂತೆ ಕುಳಿತುಕೊಂಡರು. ಪಾಸ್ ಕಳೆದುಕೊಂಡು ಬೇಸರ ಆದಂತೆ ಪ್ರತಾಪ್ ನಟಿಸಿದರು. ತಮ್ಮ ಬಳಿ ಪಾಸ್ ಇಲ್ಲವೇ ಇಲ್ಲ ಎಂಬಂತೆ ಮಾತನಾಡಿದರು. ಇದ್ದ ಒಂದು ಪಾಸ್ ಕಳೆದುಕೊಂಡು ಪೇಚು ಮುಖ ಮಾಡಿಕೊಂಡರು. ಇದರಿಂದ ಮನೆಮಂದಿಯೆಲ್ಲ ಪ್ರತಾಪ್ ಬಳಿ ಪಾಸ್ ಇಲ್ಲವೇನೋ ಎಂದೇ ತಿಳಿದುಕೊಂಡರು.
ಮನೆ ಮಂದಿಗೆಲ್ಲ ಟ್ವಿಸ್ಟ್ ಒಂದು ಕಾದಿತ್ತು. ಡ್ರೋನ್ ಪ್ರತಾಪ್ ಅವರಿಗೆ ಒಟ್ಟು 4 ಪಾಸ್ ಸಿಕ್ಕಿತ್ತು. ಒಂದನ್ನು ಜೇಬಿನಲ್ಲಿ ಇಟ್ಟುಕೊಂಡು ಮೂರನ್ನು ಬೇರೆಡೆ ಇಟ್ಟಿದ್ದರು. ತಮಗೆ ಸಿಕ್ಕಿದ್ದು ಒಂದೇ ಪಾಸ್ ಎಂಬಂತೆ ನಟಿಸಿದರು. ಬಿಗ್ ಬಾಸ್ ಕನ್ನಡ ಸೀಸನ್ 10 ಆದೇಶದ ಬಳಿಕ ಪ್ರತಾಪ್ ತಮ್ಮ ಬಳಿಯಿದ್ದ ಮೂರು ಪಾಸ್‌ಗಳನ್ನು ತೆಗೆದು ತೋರಿಸಿದರು. ಇದನ್ನು ನೋಡಿದ ಮನೆಮಂದಿಯೆಲ್ಲ ಶಾಕ್ ಆದರು. ಪ್ರತಾಪ್ ಚಾಲಾಕಿತನ ಎಲ್ಲರ ಅಚ್ಚರಿಗೆ ಕಾರಣವಾಯಿತು. ಬಿಗ್‌ಬಾಸ್ ಕನ್ನಡ 24 ಗಂಟೆ ನೇರಪ್ರಸಾರವನ್ನು JioCinemaದಲ್ಲಿ ಉಚಿತವಾಗಿ ನೋಡಿ. ಪ್ರತಿದಿನದ ಎಪಿಸೋಡ್‌ಗಳನ್ನು Colors Kannada ದಲ್ಲಿ ಪ್ರತಿದಿನ ರಾತ್ರಿ 9.30ಗೆ ವೀಕ್ಷಿಸಿ.
+ There are no comments
Add yours