ಬಿಗ್‌ಬಾಸ್‌ಗೆ ಎಂಟ್ರಿ ಕೊಟ್ಟಿರುವ ಶೋಭಾ ಶೆಟ್ಟಿ ಯಾರು..? ಮನೆಗೆ ಕಾಲಿಟ್ಟ ವಾರದಲ್ಲೆ ಹೊರ ಹೋಗ್ತಾರಾ ನಟಿ..!?

1 min read

Shobha Shetty: ಹೇ ಮಗ ಅದ್ಯಾಕೋ Bigboss ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿ ಯಲ್ಲಿ ಬಂದಿರೋ ಶೋಭಾ ಶೆಟ್ಟಿದು ಓವರ್ ಆಯ್ತು ಅಂತ ಜನ ಮಾತನಾಡಿಕೊಳ್ಳುಟ್ಟಿದ್ದಾರೆ. ವೇದಿಕೆ ಮೇಲೆ ಕಿಚ್ಚನಿಗೆ ಅಪ್ಪುಗೆ ಕೊಡಿ ಅಂತ ಕೇಳಿದ ರೀತಿಗೂ ಜನ ಕಿರಿಕಿರಿ ಆಗಿದ್ದಾರೆ. ಹಾಗಾದ್ರೆ ಯಾರು ಈ ಶೋಭಾ ಶೆಟ್ಟಿ.

ನಟಿ ಶೋಭಾ ಶೆಟ್ಟಿ ಅಗ್ನಿಸಾಕ್ಷಿ ಧಾರಾವಾಹಿಯಲ್ಲಿ ನಟಿಸುವ ಮೂಲಕ ಖ್ಯಾತಿ ಪಡೆದಿದ್ದಾರೆ. ಈ ಹಿಂದೆ ತೆಲುಗು ಬಿಗ್‌  ಸೀಸನ್ 07 ರಲ್ಲಿ ಕಿರುತೆರೆ ನಟಿ ಶೋಭಾ ಶೆಟ್ಟಿ ಭಾಗಿಯಾಗಿದ್ದರು. ಈಗ ಕನ್ನಡ ಬಿಗ್‌ ಬಾಸ್‌ ಶೋ ಗೆ ಶೋಭಾ ಶೆಟ್ಟಿ ಎಂಟ್ರಿ ಕೊಡಲಿದ್ದಾರೆ ಎನ್ನಲಾಗಿದೆ. ಶೋಭಾ ಶೆಟ್ಟಿ ನಟಿಯಾಗಿದ್ದು ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.

ಬಿಗ್ ಬಾಸ್ ತೆಲುಗು ಸೀಸನ್ 7 ಶುರುವಾದಾಗಲೇ ಸೋಷಿಯಲ್ ಮೀಡಿಯಾದಲ್ಲೆಲ್ಲಾ ಹವಾ ಎಬ್ಬಿಸಿದ್ದು, ಕನ್ನಡ ನಟಿ ಶೋಭಾ ಶೆಟ್ಟಿ. ವಾಯ್ಸ್‌ನಲ್ಲಾಗಲೀ, ಧೈರ್ಯದಲ್ಲಾಗಲೀ ಸೌಂಡ್ ಮಾಡಿದ್ದು, ಇದೇ ಶೋಭಾ ಶೆಟ್ಟಿ. ಕನ್ನಡದ ಚೆಲುವೆ ತೆಲುಗಿನಲ್ಲಿ ಹವಾ ಎಬ್ಬಿಸಿದ್ದಕ್ಕೆ ಭಾರೀ ಬೆಂಬಲ ಸಿಕ್ಕಿತ್ತು.

ಆದರೆ ಅನಿರೀಕ್ಷಿತ ತಿರುವಿನಲ್ಲಿ ಫಿನಾಲೆಗೆ ಐದು ದಿನ ಇರುವಾಗಲೇ ಶೋಭಾ ಔಟ್ ಆಗಿ ಹೊರಗೆ ಬಂದರು. ಈಗ ಕನ್ನಡ ಬಿಗ್ ಬಾಸ್ ಗೆ ಎಂಟ್ರಿ ಕೊಟ್ಟಿದ್ದಾರೆ. ಎಂಟ್ರಿ ಆಗೋ ಮುಂಚೆ ಕಿಚ್ಚನ ಜೊತೆ ಮಾತಡೋದನ್ನ ನೋಡಿದ ಫ್ಯಾನ್ಸ್ ಕಿರಿಕಿರಿ ಆಗಿದ್ದಾರೆ. ಕಿಚ್ಚ ಕೂಡ ಇದು ಕನ್ನಡ ಬಿಗ್ಬೋಸ್,ತೆಲುಗು ಅಲ್ಲ, ನಾನು 11 ಸೀಸನ್ ನಡೆಸಿದ್ದೀನಿ ಹಲವಾರು ಸ್ಟ್ರಾಂಗ್ ಸ್ಪರ್ಧಿಗಳನ್ನ ನೋಡಿದ್ದೀನಿ ಅಂತ ಶೋಭಾ ಗೆ ಕಿಚ್ಚ ಸುದೀಪ್ ಟಾಂಗ್ ಕೊಟ್ಟಿದ್ದಾರೆ. ಒಟ್ಟಿನಲ್ಲಿ ಕಿಚ್ಚನಿಗೆ ಅಷ್ಟೇ ಅಲ್ಲದೇ ಎಲ್ಲರಿಗೂ ಕಿರಿಕಿರಿ ಅನಿಸಿದೆ.

 

You May Also Like

More From Author

+ There are no comments

Add yours