- ʻಬಿಗ್ ಬಾಸ್ʼ ಬೆನ್ನಲ್ಲೇ ಹೊಸ ಸಿನಿಮಾ ಅಪ್ಡೇಟ್ ಕೊಟ್ಟ ಕಿಚ್ಚ ಸುದೀಪ್
- ʻಮ್ಯಾಕ್ಸ್ʼ ನಿರ್ದೇಶಕನ ಜೊತೆ ಹೊಸ ಸಿನಿಮಾ ಅನೌನ್ಸ್ ಮಾಡಿದ ಕಿಚ್ಚ ಸುದೀಪ್
- ಜುಲೈ ನಲ್ಲಿಯೇ ಶೂಟಿಂಗ್ ಶುರು, ಡಿಸೆಂಬರ್ 25ಕ್ಕೆ ಕಿಚ್ಚನ 47ನೇ ಸಿನಿಮಾ ರಿಲೀಸ್!
ನಟ ಕಿಚ್ಚ ಸುದೀಪ್ ನಟನೆಯ ಮ್ಯಾಕ್ಸ್ʼ ಚಿತ್ರವು ಕಳೆದ ವರ್ಷ ರಿಲೀಸ್ ಆಗಿತ್ತು. ವಿಜಯ್ ಕಾರ್ತಿಕೇಯ ಅಚರಿಗೆ ಚೊಚ್ಚಲ ನಿರ್ದೇಶನದಲ್ಲಿ ಈ ಚಿತ್ರ ದೊಡ್ಡ ಯಶಸ್ಸನ್ನು ತಂದು ಕೊಟ್ಟಿತು. ಕಡಿಮೆ ಅವಧಿಯಲ್ಲಿ ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಕಮಾಯಿ ಮಾಡಿತ್ತು. ಇದೀಗ ಮತ್ತೊಮ್ಮೆ ಕಿಚ್ಚ ಸುದೀಪ್ ʻಮ್ಯಾಕ್ಸ್ʼ ನಿರ್ದೇಶಕ ವಿಜಯ್ ಕಾರ್ತಿಕೇಯ ಅವರೊಟ್ಟಿಗೆ ಕೈ ಜೋಡಿಸಿದ್ದಾರೆ. ಯೆಸ್.. ಕಿಚ್ಚ ಸುದೀಪ್ ಅವರ 47ನೇ ಸಿನಿಮಾ ಅನೌನ್ಸ್ ಆಗಿದೆ. ಈ ಸಿನಿಮಾಗೆ ವಿಜಯ್ ಕಾರ್ತಿಕೇಯ ಆಕ್ಷನ್ ಕಟ್ ಹೇಳುತ್ತಿದ್ದಾರೆ,
ಕಿಚ್ಚ ಸುದೀಪ್ ಅಭಿನಯದ 47ನೇ ಸಿನಿಮಾ ಅನೌನ್ಸ್
ಅನೂಪ್ ಭಂಡಾರಿ ನಿರ್ದೇಶನದ ʻಬಿಲ್ಲ ರಂಗ ಬಾಷಾʼ ಸಿನಿಮಾದ ಚಿತ್ರೀಕರಣ ನಡುವೆ ಕಿಚ್ಚ ಸುದೀಪ್ ಹೊಸ ಸಿನಿಮಾವನ್ನು ಘೋಷಣೆ ಮಾಡಿದ್ದಾರೆ. ಈ ಸಿನಿಮಾಗೆ ʻಮ್ಯಾಕ್ಸ್ʼ ಡೈರೆಕ್ಟರ್ ವಿಜಯ್ ಕಾರ್ತಿಕೇಯ ಆಕ್ಷನ್ ಕಟ್ ಹೇಳುತ್ತಿದ್ದು, 1986ರಲ್ಲಿ ವಿಷ್ಣುವರ್ಧನ್ ಅಭಿನಯದ ಸತ್ಯ ಜ್ಯೋತಿ ಚಿತ್ರಕ್ಕೆ ನಿರ್ಮಾಣ ಮಾಡಿದ್ದ ಬ್ಯಾನರ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ. ಸದ್ಯ K47 ಎಂದು ವರ್ಕಿಂಗ್ ಟೈಟಲ್ ಇಟ್ಟಿರುವ ಚಿತ್ರತಂಡ, ಸೋಮವಾರದಿಂದಲೇ ಅಂದ್ರೆ ಜುಲೈ 7ರಿಂದ ಚೆನ್ನೈನಲ್ಲಿ ಶೂಟಿಂಗ್ ಮಾಡಲಿದೆ.
ಡಿಸೆಂಬರ್ 25ಕ್ಕೆ ಸಿನಿಮಾ ರಿಲೀಸ್!
ಸದ್ಯಕ್ಕೆ ಅನುಪ್ ಭಂಡಾರಿ ನಿರ್ದೇಶನದ ʻಬಿಲ್ಲ ರಂಗ ಭಾಷಾʼ ಸಿನಿಮಾದ ಚಿತ್ರೀಕರಣದಲ್ಲಿ ಸುದೀಪ್ ಬ್ಯುಸಿಯಾಗಿದ್ದಾರೆ. ಸಿನಿಮಾದ ಶೂಟಿಂಗ್ ಕೂಡ ಭರದಿಂದ ಸಾಗುತ್ತಿದೆ. ಈ ಮಧ್ಯೆ ಅವರ ಹೊಸ ಸಿನಿಮಾ ಅನೌನ್ಸ್ ಆಗಿದೆ. ಟೀಸರ್ ರಿಲೀಸ್ ಮಾಡುವ ಮೂಲಕ ಕಿಚ್ಚನ 47ನೇ ಸಿನಿಮಾ ಅನೌನ್ಸ್ ಆಗಿದೆ. ಜುಲೈ 7ರಿಂದ ಶೂಟಿಂಗ್ ಪ್ಲ್ಯಾನ್ ಮಾಡಲಾಗಿದ್ದು, ಈ ವರ್ಷದ ಕೊನೆಯಲ್ಲಿ ಅಂದ್ರೆ ಡಿಸೆಂಬರ್ 25ಕ್ಕೆ ಸಿನಿಮಾ ರಿಲೀಸ್ ಮಾಡಲು ಚಿತ್ರತಂಡ ಪ್ಲ್ಯಾನ್ ಮಾಡಿಕೊಂಡಿದೆ.
ಈ ಸಿನಿಮಾವನ್ನು ವಿಜಯ್ ಕಾರ್ತಿಕೇಯ ಡೈರೆಕ್ಟ್ ಮಾಡುತ್ತಿದ್ದಾರೆ. ʻಮ್ಯಾಕ್ಸ್ʼ ಚಿತ್ರವು ಇವರ ಚೊಚ್ಚಲ ನಿರ್ದೇಶನವಾಗಿತ್ತು ಮತ್ತು ಈ ಪ್ರಾಜೆಕ್ಟ್ ಅವರ ಎರಡನೇ ಚಿತ್ರವಾಗಿದೆ. ಚಿತ್ರದ ಕಥೆಯ ಬಗ್ಗೆ ಇನ್ನೂ ಯಾವುದೇ ಸ್ಪಷ್ಟ ಮಾಹಿತಿ ಇಲ್ಲವಾದರೂ ಇದು ʻಮ್ಯಾಕ್ಸ್ʼ ಚಿತ್ರದಂತೆ ಆಕ್ಷನ್ ಪ್ಯಾಕ್ಡ್ ಥ್ರಿಲ್ಲರ್ ಆಗಿರಬಹುದು ಎಂದು ಹೇಳಲಾಗುತ್ತಿದೆ.
ಸೆಪ್ಟೆಂಬರ್ ಕೊನೆಯಲ್ಲಿ ʻಬಿಗ್ ಬಾಸ್ʼ ಶುರು!
ಈಗಾಗಲೇ ʻಬಿಲ್ಲ ರಂಗ ಭಾಷಾʼ ಸಿನಿಮಾದಲ್ಲಿ ಸುದೀಪ್ ಬ್ಯುಸಿಯಾಗಿದ್ದಾರೆ. ಅಲ್ಲದೇ ʻಬಿಗ್ ಬಾಸ್ʼ ಕೂಡ ಶುರುವಾಗಲಿದೆ. ಇದೀಗ ಈ ಸಿನಿಮಾವನ್ನು ಒಪ್ಪಿಕೊಂಡಿದ್ದಾರೆ. ಈ ಬಗ್ಗೆ ಮಾತನಾಡಿ, “ಟೈಟ್ ಶೂಟಿಂಗ್ ಹಾಕಿಕೊಂಡಿದ್ದೇನೆ. ಕಾರಣ, ಬಿಲ್ಲ ರಂಗ ಭಾಷಾ ಅನ್ನೋದು ಬಹಳ ದೊಡ್ಡ ಸಿನಿಮಾ. ಅದೊಂದು ಪ್ರಪಂಚವನ್ನು ಕ್ರಿಯೇಟ್ ಮಾಡುತ್ತಿದ್ದೇವೆ. ಈ ವರ್ಷ ಅಂತೂ ಖಂಡಿತವಾಗಿಯೂ ಬಿಲ್ಲ ರಂಗ ಭಾಷಾ ಬರೋದಿಲ್ಲ. ನಮ್ಮ ಪ್ರಯತ್ನ ಈ ವರ್ಷ ಡಿಸೆಂಬರ್ 25ಕ್ಕೆ ಈ ಸಿನಿಮಾ ಬರಬೇಕು ಅನ್ನೋ ಹಠ ಇದೆ. ಸೆಪ್ಟೆಂಬರ್ ಕೊನೆಯಲ್ಲಿ ಬಿಗ್ ಬಾಸ್ ಶುರು ಆಗುತ್ತದೆ. ಎಲ್ಲವನ್ನೂ ಮ್ಯಾನೇಜ್ ಮಾಡುತ್ತೇನೆ” ಎಂದಿದ್ದಾರೆ ಕಿಚ್ಚ ಸುದೀಪ್.
+ There are no comments
Add yours