ಆಹಾರದಲ್ಲಿ ಈರುಳ್ಳಿ ಬಡಿಸಲಾಗಿತ್ತು ಎಂಬ ಆರೋಪದ ಮೇಲೆ ಕನ್ವಾರಿಯರ (ಕನ್ವಾರ್ ಯಾತ್ರೆ ಕೈಗೊಳ್ಳುವವರು) ಗುಂಪೊಂದು ಡಾಬಾ ಧ್ವಂಸಗೊಳಿಸಿದೆ.
ಸ್ಥಳಕ್ಕೆ ಬಂದ ಪೊಲೀಸ್ ಅಧಿಕಾರಿಗಳು ಕನ್ವಾರಿಯರನ್ನು ಸಮಾಧಾನಪಡಿಸಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಸತ್ಯನಾರಾಯಣ್ ಪ್ರಜಾಪತ್ ಹೇಳಿದ್ದಾರೆ.
ಈ ವಿಷಯದಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲ ಮತ್ತು ಕನ್ವಾರಿಯರು ಪೊಲೀಸರ ಮಧ್ಯಪ್ರವೇಶದ ನಂತರ ತಮ್ಮ ಯಾತ್ರೆಯನ್ನು ಮುಂದುವರೆಸಿದ್ದಾರೆ.
ಪುರ್ಕಾಜಿ ಪೊಲೀಸ್ ಠಾಣೆ ವ್ಯಾಪ್ತಿಯ ಫಲೌಡಾ ಬೈಪಾಸ್ ಬಳಿಯ ದೆಹಲಿ-ಹರಿದ್ವಾರ ರಾಷ್ಟ್ರೀಯ ಹೆದ್ದಾರಿಯಲ್ಲಿ ಸೋಮವಾರ ರಾತ್ರಿ ಈ ಘಟನೆ ನಡೆದಿದೆ.
ಈ ವಿಷಯದಲ್ಲಿ ಯಾವುದೇ ದೂರು ಬಂದಿಲ್ಲ, ಆದ್ದರಿಂದ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
+ There are no comments
Add yours