Delhi Blast: ‘ಬಿಹಾರ ಚುನಾವಣೆ ಸಮಯದಲ್ಲೇ ಏಕೆ ಸ್ಫೋಟ ನಡೆಯಿತು? ಯಾರೂ ಗೂಟ ಹೊಡೆದು ಇರಲ್ಲ’: ಸಚಿವ ಜಮೀರ್ ವಿಚಿತ್ರ ಪ್ರಶ್ನೆ

1 min read

ಬೆಂಗಳೂರು: ದೆಹಲಿಯ ಕೆಂಪುಕೋಟೆ ಆವರಣದಲ್ಲಿ ನಡೆದ ಕಾರ್ ಬಾಂಬ್ ಸ್ಫೋಟದ ಕುರಿತು ಶಂಕೆ ವ್ಯಕ್ತಪಡಿಸಿರುವ ಕರ್ನಾಟಕದ ಅಲ್ಪ ಸಂಖ್ಯಾತ ಸಚಿವ ಬಿಝಡ್ ಜಮೀರ್ ಅಹ್ಮದ್ ಖಾನ್ ‘ಬಿಹಾರ ಚುನಾವಣೆಯ ಒಂದು ದಿನ ಮೊದಲು ಏಕೆ ಸ್ಫೋಟ ನಡೆಯಿತು’ ಎಂದು ಪ್ರಶ್ನಿಸಿದ್ದಾರೆ.

ಬೆಂಗಳೂರಿನಲ್ಲಿ ಬುಧವಾರ ಮಾತನಾಡಿದ ಜಮೀರ್, ‘ಇಸ್ಲಾಂ ಧರ್ಮದಲ್ಲಿ ಭಯೋತ್ಪಾದನೆಗೆ ಅವಕಾಶ ಇಲ್ಲ. ಹಾಗಾಗಿ ಭಯೋತ್ಪಾದಕರು ಮುಸ್ಲಿಮರಾಗಲು ಸಾಧ್ಯವಿಲ್ಲ ಎಂದರು.

ಅಂತೆಯೇ ದೆಹಲಿ ಕಾರ್‌ ಸ್ಫೋಟ ಪ್ರಕರಣ ಹಾಗೂ ಉಗ್ರಗಾಮಿ ಚಟುವಟಿಕೆಯ ಆರೋಪದಲ್ಲಿ ಬಂಧಿತರಾಗಿರುವ ವೈದ್ಯರ ನೆಟ್‌ವರ್ಕ್ ಬಗ್ಗೆ ಮಾತನಾಡಿದ ಅವರು, ಬಿಹಾರ ಚುನಾವಣೆಯ ಒಂದು ದಿನ ಮೊದಲು ಏಕೆ ಸ್ಫೋಟ ನಡೆದಿತ್ತು ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.

‘ಬಿಹಾರ ಚುನಾವಣೆ ಒಂದು ದಿನದ ಮುಂಚೆ ಬ್ಲಾಸ್ಟ್ ಹೇಗಾಯಿತು? ಹಾಗೇನಾದರೂ ಆಗಿದ್ರೆ ಯಾರಿಗೂ ಒಳ್ಳೆಯದಾಗಲ್ಲ. ಯಾರೂ ಇಲ್ಲಿಯೇ ಗೂಟ ಹೊಡೆದುಕೊಂಡು ಇಲ್ಲಿಯೇ ಇರುವುದಿಲ್ಲ. ಸಿಎಂ ಆಗ್ಲಿ ಪ್ರಧಾನಿ ಆಗಲು ಯಾರೂ ಶಾಶ್ವತವಾಗಿ ಇಲ್ಲಿಯೇ ಗೂಟ ಹೊಡೆದು ಇರುವುದಿಲ್ಲ ಎಂದು ಹೇಳಿದರು.

ಹುಳ ಬಿದ್ದು ಸಾಯ್ತಾರೆ

ಸ್ಫೋಟದ ಬಗ್ಗೆ ಅನುಮಾನ ಇದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ‘ಬ್ಲಾಸ್ಟ್ ಕುರಿತಾಗಿ ನನಗೆ ಅನುಮಾನ ಇಲ್ಲ. ಆದರೆ ಈ ಪ್ರಶ್ನೆಯನ್ನು ನಾನು ಕೇಳುತ್ತಿದ್ದೇನೆ. ಭಯೋತ್ಪಾದಕರಿಗೆ ಜಾತಿಯೇ ಇಲ್ಲ. ಇಸ್ಲಾಂ ಧರ್ಮದಲ್ಲಿ ಟೆರರಿಸಂಗೆ ಯಾರೂ ಅವಕಾಶನೇ ಕೊಟ್ಟಿಲ್ಲ ಎಂದರು.

ಅಂತೆಯೇ ಇಸ್ಲಾಂ ಧರ್ಮದ ಪ್ರಕಾರ ಭಯೋತ್ಪಾದನೆ ಮಾಡುವವನು ಮುಸ್ಲಿಂ ಅಲ್ಲ. ಹಾಗೇನಾದರೂ ಇಂತಹ ಕೃತ್ಯ ಎಸಗಿದರೆ ಹುಳ ಬಿದ್ದು ಸಾಯ್ತಾನೆ ಅವನು. ಆದರೆ ಕಾರ್ ಸ್ಫೋಟ ಪ್ರಕರಣದ ಬಗ್ಗೆ ಒಂದಿಷ್ಟು ಪ್ರಶ್ನೆಗಳು ಇವೆ. ನವೆಂಬರ್ 11 ಕ್ಕೆ ಬಿಹಾರ ಚುನಾವಣೆ ನಡೆಯಿತು. ಒಂದು ದಿನದ ಮುಂದೆ ಬ್ಲಾಸ್ಟ್ ಆಗಿದೆ. ಅದು ಹೇಗೆ ಎಂದು ಪ್ರಶ್ನಿಸಿದರು.

ಟೆರರಿಸ್ಟ್ ಗಳಿಗೆ ರಾಜಕೀಯ ಸಂಪರ್ಕ ಇತ್ತು ಎನ್ನುವುದನ್ನು ನಾನು ಕೇಳ್ಪಟ್ಟಿದ್ದು ಹೇಳ್ತಿದ್ದೇನೆ. ಎಲ್ಲವೂ ಈಗ ಊಹಾಪೋಹಗಳು ಸೃಷ್ಟಿ ಆಗ್ತಿವೆ. ಹಾಗೇನಾದರೂ ಆದ್ರೆ ಯಾರಿಗೂ ಒಳ್ಳೆಯದಾಗಲ್ಲ ಎಂದು ಜಮೀರ್ ಹೇಳಿದರು.

You May Also Like

More From Author

+ There are no comments

Add yours