ನವದೆಹಲಿ,- ರಣವೀರ್ ಸಿಂಗ್ ನಟನೆಯ ಧುರಂದರ್ ಸಿನಿಮಾವು 1000 ಕೋಟಿ ಕ್ಲಬ್ ಸೇರುತ್ತಿದ್ದಂತೆ ಸಂಜು ಬಾಬಾ ಬಾಲಿವುಡ್ ಬಾದ್ ಷಾ ಹಾಗೂ ಪ್ರಭಾಸ್ ಅವರ ಮಹತ್ತರ ದಾಖಲೆ ಹಿಂದಿಕ್ಕಿದ್ದಾರೆ.
ಹಲವು ವರ್ಷಗಳ ಬಿಡುವಿನ ನಂತರ ಎರಡನೇ ಇನ್ನಿಂಗ್‌್ಸ ಆರಂಭಿಸಿರುವ ಸಂಜಯ್ ದತ್ ಅವರ ಸಿನಿ ಜೀವನ ಉತ್ತುಂಗದಲ್ಲಿದೆ. ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ 2 ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಗೂ ಎಂಟ್ರಿ ನೀಡಿದ್ದ ಸಂಜಯ್ ದತ್ ಅವರು ನಟಿಸಿದ ಕೆಜಿಎಫ್ 2',ಜವಾನ್’ ಹಾಗೂ `ಧುರಂದರ್’ ಸಿನಿಮಾವು 1000 ಕೋಟಿ ಕ್ಲಬ್ ಸೇರಿದ ಮೊದಲ ನಟ ಎಂಬ ದಾಖಲೆಗೆ ಸಂಜು ಭಾಯ್ ಭಾಜನರಾಗಿದ್ದಾರೆ.
ಈ ಹಿಂದೆ ಶಾರುಖ್‌ಖಾನ್ ನಟಿಸಿದ್ದ ಪಠಾಣ್' ಹಾಗೂಜವಾನ್’ ಸಿನಿಮಾಗಳು 1000 ಕೋಟಿ ಕ್ಲಬ್ ಸೇರಿದ್ದರೆ, ಡಾರ್ಲಿಂಗ್ ಪ್ರಭಾಸ್ ನಟನೆಯ ಬಾಹುಬಲಿ 2' ಹಾಗೂಕಲ್ಕಿ 2898′ ಸಿನಿಮಾಗಳು ಕೂಡ 1000 ಕೋಟಿ ಕ್ಲಬ್ ಸೇರಿದೆ. ಆದರೆ ಈ ನಟರ 3 ಸಿನಿಮಾಗಳು ಸತತವಾಗಿ 1000 ಕೋಟಿ ವಹಿವಾಟು ನಡೆಸಿಲ್ಲ.

+ There are no comments
Add yours