ಹುಬ್ಬಳ್ಳಿ: ಪ್ರಸ್ತುತ ಬಹುತೇಕ ಕಂಪನಿಗಳು ಪರಿಸರ ರಕ್ಷಣೆಯ ಉದ್ದೇಶದಿಂದ ಎಲೆಕ್ಟ್ರಿಕ್ ವಾಹನಗಳ ತಯಾರಿಕೆಯಲ್ಲಿ ತೊಡಗಿವೆ. ಇನ್ನೂ ಇತ್ತೀಚಿನ ದಿನಗಳಲ್ಲಿ ಗಗನಮುಖಿಯಾಗಿರುವ ಪೆಟ್ರೋಲ್ ಡೀಸೆಲ್ ದರದಿಂದ ಪರಿಹಾರ ಪಡೆಯಲು ಜನರು ಎಲೆಕ್ಟ್ರಿಕ್ ವಾಹನಗಳತ್ತ ಮುಖ ಮಾಡಿದ್ದಾರೆ. ಆದರೆ, ಲಕ್ಷಾಂತರ ರೂ. ಹಣ ನೀಡಿ ಖರೀದಿಸಿದ ಎಲೆಕ್ಟ್ರಿಕಲ್ ಬೈಕ್ನಿಂದ ನಿತ್ಯ ಪರದಾಡುವಂತಾಗಿದೆ. ಎಲೆಕ್ಟ್ರಿಕ್ ಬೈಕ್ಗಳು ಪದೇ ಪದೇ ರಿಪೇರಿಗೆ ಬರುತ್ತಿವೆ ಎಂದು ಓಲಾ ಎಲೆಕ್ಟ್ರಿಕಲ್ ಬೈಕ್ ಖರೀದಿಸಿದ ಮಾಲೀಕರು ಪರದಾಡುತ್ತಿದ್ದಾರೆ.
ಹೌದು, ಓಲಾ ಎಲೆಕ್ಟ್ರಿಕಲ್ ಬೈಕ್ ನಿಂದಾಗಿ ದಿನನಿತ್ಯ ಸಂಕಷ್ಟಕ್ಕೆ ಸಿಲುಕುತ್ತಿರುವ ಸವಾರರು, ಯಾಕಪ್ಪ ಈ ಬೈಕ್ ತಗೊಂಡೆ ಎನ್ನುವಂತಾಗಿದೆ ಖರೀದಿ ಮಾಡಿದವರ ಸ್ಥಿತಿ. ದಿನೇ ದಿನೇ ಓಲಾ ಕಂಪನಿಯ ದ್ವಿಚಕ್ರ ವಾಹನಗಳಲ್ಲಿ ದೋಷಗಳು ಕಂಡು ಬರುತ್ತಿರುವ ಹಿನ್ನಲೆಯಲ್ಲಿ, ಹುಬ್ಬಳ್ಳಿಯಲ್ಲಿ ಓಲಾ ಎಲೆಕ್ಟ್ರಿಕಲ್ ಬೈಕ್ ಖರೀದಿ ಮಾಡಿದ ಗ್ರಾಹಕರು, ಶೋ ರೂಂ ಬಂದ್ ಮಾಡಿ ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಇನ್ನು ಓಲಾ ಕಂಪನಿಯ ಎಲೆಕ್ಟ್ರಿಕಲ್ ಬೈಕ್ಗಳು ಏಕಾಏಕಿ ರಸ್ತೆ ಮಧ್ಯದಲ್ಲೇ ಬಂದ್ ಆಗುತ್ತಿವೆ. ಬೈಕ್ ಖರೀದಿ ಮಾಡಿದಾಗಿಂದ ಪ್ರತಿದಿನ ಶೋ ರೂಂ ಗೆ ತೆಗೆದುಕೊಂಡು ಹೋಗುವ ಅನಿವಾರ್ಯತೆ ಎದುರಾಗಿದೆ. ಹುಬ್ಬಳ್ಳಿಯ ಹೊಸೂರು ಬಸ್ ನಿಲ್ದಾಣದ ಎದುರಿರುವ ಓಲಾ ಕಂಪನಿ ಶೋರೂಂನಲ್ಲಿ ಈ ರೀತಿ ಆಕ್ರೋಶ ಹೊರಹಾಕಿರುವ ಗ್ರಾಹಕರು ಎಷ್ಟೇ ಬಾರಿ ರಿಪೇರಿ ಮಾಡಿದರೂ ಮತ್ತೆ ಮತ್ತೆ ಬೈಕ್ ನಲ್ಲಿ ದೋಷ ಕಂಡು ಬರುತ್ತಿದೆ. ಎಲ್ಲಾ ಕೆಲಸ ಬಿಟ್ಟು ಸರ್ವೀಸ್ ಸೆಂಟರ್ದಲ್ಲಿ ನಿಲ್ಲುವಂತಾಗಿದೆ ಎಂದು ಎಲೆಕ್ಟ್ರಿಕ್ ಬೈಕ್ ಕಂಪನಿಯ ವಿರುದ್ಧ ವಾಗ್ಧಾಳಿ ನಡೆಸಿದ್ದಾರೆ.
ಇನ್ನೂ ಓಲಾ ಬೈಕ್ ಖರೀದಿಯಿಂದಾಗಿ ನಿತ್ಯ ಪರದಾಡುತ್ತಿರುವ ಹುಬ್ಬಳ್ಳಿಯ ಗ್ರಾಹಕರು ಶೋ ರೂಂ ಬಂದ್ ಮಾಡಿ ಪ್ರತಿಭಟನೆ ನಡೆಸಿದರು. ಈ ವೇಳೆ ಲಕ್ಷಾಂತರ ರೂಪಾಯಿ ನೀಡಿ ತೆಗೆದುಕೊಂಡ ಬೈಕ್ನ್ನು ಸರ್ವಿಸ್ ಸೆಂಟರ್ ದಲ್ಲೆ ಇಡಬೇಕಾ, ನಮಗೆ ದುಡ್ಡು ವಾಪಸ್ ನೀಡಿ ಎಂದು ಕಂಪನಿ ವಿರುದ್ಧ ಗ್ರಾಹಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೆ, ಓಲಾ ಸಿಬ್ಬಂದಿಯನ್ನು ಹುಬ್ಬಳ್ಳಿಯ ವಿದ್ಯಾನಗರ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ.
+ There are no comments
Add yours