3 ರಾಜ್ಯಗಳಲ್ಲಿ ಕಾಂಗ್ರೆಸ್‌ಗೆ ಭಾರಿ ಹಿನ್ನೆಡೆ..! ತಲೆಕೆಳಗಾಯ್ತಾ ʼಕೈʼ ಗ್ಯಾರಂಟಿ ಪ್ಲಾನ್‌..?

1 min read

Election Results 2023 Live : ಪಂಚ ರಾಜ್ಯಗಳ ಪೈಕಿ ಸಧ್ಯ 4 ರಾಜ್ಯಗಳ ವಿಧಾನಸಭಾ ಚುನಾವಣೆಯ ಮತ ಎಣಿಕೆ ಕಾರ್ಯ ನಡೆಯುತ್ತಿದೆ. ಮೊದಲಿಗೆ ನಾಲ್ಕು ರಾಜ್ಯಗಳಲ್ಲಿ ಮುನ್ನೆಡೆ ಕಾಯ್ದುಕೊಂಡು ಬಂದ ಕೈ ಪಾಳಯಕ್ಕೆ ಇದೀಗ ಹಿನ್ನೆಡೆಯಾಗಿದ್ದು, ತೆಲಂಗಾಣ ಹೊರತು ಪಡಿಸಿ 4 ರಾಜ್ಯಗಳಲ್ಲಿ ಕಾಂಗ್ರೆಸ್‌ ಹಿನ್ನೆಡೆ ಅನುಭವಿಸುತ್ತಿದೆ.

ಮಧ್ಯ ಪ್ರದೇಶ, ರಾಜಸ್ಥಾನ, ಛತ್ತೀಸ್ ಗಢ ಕಾಂಗ್ರೆಸ್‌ ಹಿನ್ನೆಡೆಯಾಗುತ್ತಿದೆ. ತೆಲಂಗಾಣ ಹೊರತು ಪಡಿಸಿ ಬಿಜೆಪಿ ಭರ್ಜರಿ ಮುನ್ನೆಡೆ ಕಾಯ್ದುಕೊಂಡಿದೆ. ಆಡಳಿತಾರೂಢ ಬಿಆರ್‌ಎಸ್‌ ಪಕ್ಷಕ್ಕೆ ಹಿನ್ನೆಡೆ ಸಾಧಿಸುತ್ತಿದ್ದು, ತೆಲಂಗಾಣದಲ್ಲಿ ಈ ಬಾರಿ ಕಾಂಗ್ರೆಸ್‌ ಸರ್ಕಾರ ಸ್ಥಾಪಿಸುವ ಮುನ್ಸೂಚನೆ ವ್ಯಕ್ತವಾಗಿದೆ.

ಇನ್ನು ಫಲಿತಾಂಶಗಳನ್ನು ನೋಡುವುದಾದರೆ ಸಧ್ಯ ಬಿಜೆಪಿ ಮಧ್ಯ ಪ್ರದೇಶದಲ್ಲಿ 137, ರಾಜಸ್ಥಾನ 114 ಮತ್ತು ಛತ್ತೀಸ್‌ ಗಢದಲ್ಲಿ 48 ಸ್ಥಾನಗಳಲ್ಲಿ ಮುನ್ನೆಡೆ ಸಾಧಿಸಿದೆ. ಆದ್ರೆ, ತೆಲಂಗಾಣದಲ್ಲಿ ಕೇವಲ 08 ಕ್ಷೇತ್ರಗಳಲ್ಲಿ ಮಾತ್ರ ಬಿಜೆಪಿ ಮುನ್ನೆಡೆ ಸಾಧಿಸಿದೆ.

ಕಾಂಗ್ರೆಸ್‌ ಫಲಿತಾಂಶ ನೋಡುವುದಾದರೆ, ಮಧ್ಯ ಪ್ರದೇಶದಲ್ಲಿ 92, ರಾಜಸ್ಥಾನ 70 ಮತ್ತು ಛತ್ತೀಸ್‌ ಗಢದಲ್ಲಿ 40 ಸ್ಥಾನಗಳಲ್ಲಿ ಮುನ್ನೆಡೆ ಕಾಯ್ದುಕೊಂಡು ಬಂದಿದೆ. ತೆಲಂಗಾಣದಲ್ಲಿ 64 ಕ್ಷೇತ್ರಗಳಲ್ಲಿ ಕೈ ಪಡೆ ಭರ್ಜರಿ ಮುನ್ನೆಡೆ ಸಾಧಿಸಿದೆ. ಆದ್ರೆ ಒಂದು ರಾಜ್ಯ ಬಿಟ್ಟರೆ ಮಿಕ್ಕ ಮೂರು ರಾಜ್ಯಗಳಲ್ಲಿ ಭಾರೀ ಹಿನ್ನೆಡೆ ಅನುಭವಿಸುತ್ತಿದೆ.

 

You May Also Like

More From Author

+ There are no comments

Add yours