IPL 2024: ಸ್ಟಾರ್ ಪ್ಲೇಯರ್ಸ್ ಆದ್ರೂ ಐಪಿಎಲ್ ಹರಾಜಿನಲ್ಲಿ ಬಿಕರಿಯಾಗದ ಆಟಗಾರರು ಇವರು

1 min read

IPL 2024: ಆಸ್ಟ್ರೇಲಿಯಾದ ವೇಗಿ ಮಿಚೆಲ್ ಸ್ಟಾರ್ಕ್ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್ 2024) ಇತಿಹಾಸದಲ್ಲಿ ಅತ್ಯಂತ ದುಬಾರಿ ಬೆಲೆಗೆ ಮಾರವಾದ ಆಟಗಾರನಾಗಿದ್ದಾರೆ. ಮಂಗಳವಾರ ದುಬೈನಲ್ಲಿ ನಡೆದ ಐಪಿಎಲ್ ಹರಾಜಿನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ 24.75 ಕೋಟಿಗೆ ಅವರನ್ನು ಖರೀದಿಸಿದೆ. ಪ್ಯಾಟ್ ಕಮ್ಮಿನ್ಸ್ ಈ ಹಿಂದೆ ಐಪಿಎಲ್ ಇತಿಹಾಸದಲ್ಲಿ ಅತ್ಯಂತ ದುಬಾರಿ ಆಟಗಾರರಾಗಿದ್ದರು. ಅವರನ್ನು ಸನ್‌ರೈಸರ್ಸ್ ಹೈದರಾಬಾದ್ ತಂಡವು 20.50 ಕೋಟಿ ರೂ ಗೆ ತೆಗೆದುಕೊಂಡಿತ್ತು. ಹರಾಜಿನಲ್ಲಿ ಮುಂಬೈ ಇಂಡಿಯನ್ಸ್ (MI) ಮತ್ತು ಡೆಲ್ಲಿ ಕ್ಯಾಪಿಟಲ್ಸ್ (DC), ಗುಜರಾತ್ ಟೈಟಾನ್ಸ್ (GT) ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ (KKR) ಮಿಚೆಲ್ ಸ್ಟಾರ್ಕ್ ಗಾಗಿ ಬಿಡ್ ನಡೆಸಿದರು. ಅಂತಿಮವಾಗಿ ಕೋಲ್ಕತ್ತಾ ನೈಟ್ ರೈಡರ್ಸ್ 24 ಕೋಟಿ 75 ಲಕ್ಷಕ್ಕೆ ಸ್ಟಾರ್ಕ್ ಅವರನ್ನು ಖರೀದಿಸಿತು.

ಐಪಿಎಲ್ 2024 ರ ಹರಾಜಿನಲ್ಲಿ ಬಿಡ್ ಮಾಡದ ಆಟಗಾರರಲ್ಲಿ ಆಸ್ಟ್ರೇಲಿಯಾದ ದಿಗ್ಗಜ ಸ್ಟೀವ್ ಸ್ಮಿತ್ ಕೂಡ ಸೇರಿದ್ದಾರೆ. ಅವರ ಮೂಲ ಬೆಲೆ 2 ಕೋಟಿ ರೂ. ಆದರೆ ಅವರನ್ನು ಯಾರೂ ಖರೀದಿಸಿಲ್ಲ. ಆಸ್ಟ್ರೇಲಿಯಾದ ಜೋಶ್ ಇಂಗ್ಲಿಸ್ ಕೂಡ ಅನ್ ಸೋಲ್ಡ್ ಆಗಿದ್ದಾರೆ. ಅವರ ಮೂಲ ಬೆಲೆಯೂ ರೂ.2 ಕೋಟಿ.

ಜೋಶ್ ಹ್ಯಾಜಲ್‌ವುಡ್, ಆದಿಲ್ ರಶೀದ್, ರಾಸ್ಸಿ ವ್ಯಾನ್ ಡೆರ್ ಡಸ್ಸೆನ್, ಜೇಸನ್ ಹೋಲ್ಡರ್, ಸೌಥಿ ಮುಂತಾದ ವಿದೇಶಿ ಆಟಗಾರರು  ಅನ್ ಸೋಲ್ಡ್ ಆಗಿದ್ದಾರೆ. ಇದರಲ್ಲಿ ಭಾರತದ ಸ್ಟಾರ್ ಆಟಗಾರರೂ ಹರಾಜಿನಲ್ಲಿ ಬಿಕರಿಯಾಗಲಿಲ್ಲ. ಈ ಪಟ್ಟಿಯಲ್ಲಿ ಹನುಮ ವಿಹಾರಿ, ವರುಣ್ ಆರೋನ್, ಕುಲದೀಪ್ ಯಾದವ್, ವಿರಾಟ್ ಸಿಂಗ್ ಮುಂತಾದ ಆಟಗಾರರು ಇದ್ದಾರೆ.

ಕರುಣ್ ನಾಯರ್, ಸ್ಟೀವ್ ಸ್ಮಿತ್, ಜೋಶ್ ಇಂಗ್ಲಿಸ್, ಮೆಂಡಿಸ್, ಜೋಶ್ ಹ್ಯಾಜಲ್‌ವುಡ್, ವಕಾರ್ ಸಲಾಮ್ಖೈಲ್, ಆದಿಲ್ ರಶೀದ್, ಅಕೀಲ್ ಹೊಸೈನ್, ಇಶ್ ಸೋಧಿ, ತಬ್ರಿಜ್ ಶಮ್ಸಿ, ರೋಹನ್ ಕುನ್ನುಮ್ಮಾಲ್, ಪ್ರಿಯಾಂಸ್ ಆರ್ಯ, ಮನನ್ ವೋಹ್ರಾ, ಸರ್ಬರಾಜ್ ಖಾನ್, ರಾಜ್ ಅನ್ ವಿವ್ರಂತ್ ಖಾನ್ ಶರ್ಮಾ, ಅಧಿತ್ ಶೇತ್, ಹೃತಿಕ್ ಶೋಕೀನ್, ಉರ್ವಿಲ್ ಪಟೇಲ್, ವಿಷ್ಣು ಸೋಲಂಕಿ, ಕುಲದೀಪ್ ಯಾದವ್, ಇಶಾನ್ ಬೋರೆಲ್, ಶಿವ ಸಿಂಗ್, ಮುರ್ಗನ್ ಅಶ್ವಿನ್, ಪುಲ್ಕಿತ್ ನಾರಂಗ್, ಫಿನ್ ಅಲೆನ್, ಕಾಲಿನ್ ಮುನ್ರೊ, ರಾಸ್ಸಿ ವ್ಯಾನ್ ಡೆರ್ ಡ್ಯಸೆನ್, ಕೈಸ್ ಅಹ್ಮದ್, ಮೈಕೆಲ್ ಬ್ರೇಸ್‌ವೆಲ್, ಜೇಮ್ಸ್ ನೀಶಮ್, ಪಾಲ್, ಓಡಿಯನ್ ಸ್ಮಿತ್, ದುಷ್ಮಂತ ಸಮೀರಾ, ಬೆನ್ ಡುವರ್‌ಶುಯಿಸ್, ಮ್ಯಾಟ್ ಹೆನ್ರಿ, ಕೈಲ್ ಜೇಮಿಸನ್, ಟೈಮಲ್ ಮಿಲ್ಸ್, ಆಡಮ್ ಮಿಲ್ನೆ.

You May Also Like

More From Author

+ There are no comments

Add yours