ಸ್ಯಾಂಡಲ್ವುಡ್ (Sandalwood) ಮೂಲಕ ಸಿನಿಮಾ ಇಂಡಸ್ಟ್ರಿಗೆ ಕಾಲಿಟ್ಟ ನಿರ್ದೇಶಕ ಪ್ರಶಾಂತ್ ನೀಲ್ (Prashanth Neel), ಸ್ಟಾರ್ ಡೈರೆಕ್ಟರ್ ಆಗಿ ಮಿಂಚುತ್ತಿದ್ದಾರೆ. ಸಲಾರ್ ಸಿನಿಮಾ ಅದ್ಧೂರಿಯಾಗಿ ತೆರೆ ಕಂಡಿದೆ. ಈ ಮೂಲಕ ಪ್ರಶಾಂತ್ ಹ್ಯಾಟ್ರಿಕ್ ಬ್ಲಾಕ್ಬಸ್ಟರ್ ನೀಡಿದ್ದಾರೆ. ಸಲಾರ್ ಸಿನಿಮಾ ನೋಡಿದವರೆಲ್ಲಾ ಪ್ರಶಾಂತ್ ನೀಲ್ ಪವರ್ಫುಲ್ ನಿರ್ದೇಶನವನ್ನು ಕೊಂಡಾಡುತ್ತಿದ್ದಾರೆ. ಕೆಜಿಎಫ್ ಸಿನಿಮಾಗಳನ್ನು (KGF Movie) ನೀಡಿ ಬಾಲಿವುಡ್ ಬಾಕ್ಸ್ ಆಫೀಸ್ ಅಲುಗಾಡಿಸಿದ್ದ ಪ್ರಶಾಂತ್ ನೀಲ್, ಸಲಾರ್ ಸಿನಿಮಾ (Salaar Movie) ಮೂಲಕ ದೇಶ-ವಿದೇಶಗಳನ್ನು ಸಖತ್ ಸದ್ದು ಮಾಡ್ತಿದ್ದಾರೆ.
ಸಲಾರ್ ಸಿನಿಮಾದಲ್ಲಿ ಅದ್ಧೂರಿ ಆ್ಯಕ್ಷನ್
ಖಾನ್ಸಾರ್ ಸಿಟಿಯ ವೈಭವವನ್ನು ಪ್ರೇಕ್ಷಕರ ಕಣ್ಣ ಮುಂದೆ ಇಡುವಲ್ಲಿ ಪ್ರಶಾಂತ್ ನೀಲ್ ಗೆದ್ದಿದ್ದಾರೆ. ನಿರ್ದೇಶಕ ಪ್ರಶಾಂತ್ ನೀಲ್ ವೈಲೆನ್ಸ್ ಸಿಟಿಯನ್ನು ತೋರಿಸುವ ರೀತಿ ಅದ್ಬುತವಾಗಿದೆ. ಬ್ಲ್ಯಾಕ್ ಶೇಡ್ನಲ್ಲಿ ಸಿನಿಮಾ ಮುಂದುವರೆಯುತ್ತದೆ. ದೇವ ಹಾಗೂ ವರದರಾಜ್ ಬಾಲ್ಯದ ಸ್ನೇಹವನ್ನು ಪ್ರಶಾಂತ್ ನೀಲ್ ಮನಮುಟ್ಟಿವಂತೆ ಪರದೆ ಮೇಲೆ ತಂದಿದ್ದಾರೆ.
ಯಶಸ್ಸಿನ ಓಟ ಮುಂದುವರೆಸಿದ ಪ್ರಶಾಂತ್ ನೀಲ್
ಪ್ರಶಾಂತ್ ನೀಲ್ ಗೆಲುವಿನ ಓಟ ಮುಂದುವರೆಸಿದ್ದಾರೆ. ಉಗ್ರಂ ಸಿನಿಮಾ ಮೂಲಕ ಪ್ರತಿಭಾನ್ವಿತ ಡೈರೆಕ್ಟರ್ ಎಂದು ಕರೆಸಿಕೊಂಡಿದ್ದ ಪ್ರಶಾಂತ್ ನೀಲ್, ಕೆಜಿಎಫ್ 1 , ಕೆಜಿಎಫ್ 2 ಸಿನಿಮಾ ಸಕ್ಸಸ್ ಮೂಲಕ ಸ್ಟಾರ್ ಡೈರೆಕ್ಟರ್ ಆದ್ರು. ಸಲಾರ್ ಸಿನಿಮಾ ಮೂಲಕ ಹ್ಯಾಟ್ರಿಕ್ ಗೆಲುವಿನ ಓಟವನ್ನು ಮುಂದುವರೆಸಿದ್ದಾರೆ.
‘ಸಲಾರ್’ಗೆ ಸೆಲ್ಯೂಟ್ ಹೊಡೆದ ಮಾಸ್ ಫ್ಯಾನ್ಸ್!
ವಿಚ್ ಈಸ್ ವೈಲೆಂಟ್ ಸಿಡಿ ಅಂತಾನೇ ಕ್ಯಾಪ್ಶನ್ ಕೊಟ್ಟು ರಿಲೀಸ್ ಮಾಡಿದ ಸಲಾರ್ ಸಿನಿಮಾದ ತುಂಬಾ ವೈಲೆನ್ಸ್ ಜೋರಾಗಿದೆ. ಮಾಸ್ ಸಿನಿಮಾ ಇಷ್ಟಪಡುವವರಿಗೆ ಇದು ಅದ್ಬುತ ಲೋಕವನ್ನೇ ಕಣ್ಣ ಮುಂದೆ ತೆರೆದಿಡುತ್ತೆ. ಮಾಸ್ ಮಹಾರಾಜ್ ಪ್ರಭಾಸ್ ಅಬ್ಬರ ಅಭಿಮಾನಿಗಳ ಕಣ್ಣುಕುಕ್ಕುವಂತೆ ಮಾಡಿದ್ದು, ಮತ್ತೆ ‘ಛತ್ರಪತಿ’ ಅವತಾರದಲ್ಲಿ ಪ್ರಭಾಸ್ ಕಂಡು ಫ್ಯಾನ್ಸ್ ಖುಷ್ ಆಗಿದ್ದಾರೆ.
ಸಲಾರ್ ಸುನಾಮಿ ಹವಾ ಜೋರೋ ಜೋರು
ಖಾನ್ಸಾರ್ ಕಾಳಗವನ್ನು ಸಿನಿಪ್ರೇಮಿಗಳು ಕಣ್ತುಂಬಿಕೊಳ್ತಿದ್ದಾರೆ. ಸಲಾರ್ ರಿಲೀಸ್ ಹಿನ್ನೆಲೆ ನಿನ್ನೆ ಮಧ್ಯರಾತ್ರಿಯಿಂದಲೇ ಸೆಲೆಬ್ರೇಷನ್ ಜೋರಾಗಿದೆ. ಪ್ರಭಾಸ್ ಅಭಿಮಾನಿಗಳು ಎಲ್ಲೆಡೆ ಹಬ್ಬ ಆಚರಿಸಿದಂತೆ ಸಂಭ್ರಮಿಸುತ್ತಿದ್ದಾರೆ. ಆಂಧ್ರ ಪ್ರದೇಶ ಹಾಗೂ ತೆಲಂಗಾಣದಲ್ಲಿ ಮಧ್ಯರಾತ್ರಿ ಒಂದು ಗಂಟೆ ಶೋಗೆ ಸಿನಿಮಾ ರಿಲೀಸ್ ಮಾಡಿದ್ರೆ. ಕೇರಳ ಸೇರಿದಂತೆ ಹಲವೆಡೆ ಬೆಳಗಿನ ಜಾವ 4 ಗಂಟೆಗೆ ಶೋ ಶುರುವಾಗಿದೆ.
6 ಸಾವಿರಕ್ಕೂ ಹೆಚ್ಚು ಸ್ಕ್ರೀನ್ಗಳಲ್ಲಿ ಸಲಾರ್ ಅಬ್ಬರ
ದೇಶದಾದ್ಯಂತ 6 ಸಾವಿರಕ್ಕೂ ಹೆಚ್ಚು ಸ್ಕ್ರೀನ್ಗಳಲ್ಲಿ ಸಲಾರ್ ಸಿನಿಮಾ ರಿಲೀಸ್ ಆಗಿದೆ. ಮಲ್ಟಿಫ್ಲೆಕ್ಸ್ ತಾರತಮ್ಯದ ಹಿನ್ನೆಲೆ ಕೆಲ ಮಲ್ಟಿಫ್ಲೆಕ್ಸ್ನಲ್ಲಿ ಸಲಾರ್ ರಿಲೀಸ್ ಆಗೋದಿಲ್ಲ ಎನ್ನುವ ಸುದ್ದಿ ಹಬ್ಬಿತ್ತು. PVR ಮಲ್ಟಿಫ್ಲೆಕ್ಸ್ ಸಲಾರ್ ಸಿನಿಮಾವನ್ನು ಎಲ್ಲಾ ಮಲ್ಟಿಫ್ಲೆಕ್ಸ್ಗಳಲ್ಲೂ ರಿಲೀಸ್ ಮಾಡುವುದಾಗಿ ಹೇಳಿ ಸಮಸ್ಯೆ ಬಗೆಹರಿಸಿತ್ತು. ಎಲ್ಲೆಡೆ ಸಲಾರ್ ಅಬ್ಬರದ ಪ್ರದರ್ಶನ ಕಾಣ್ತಿದೆ.
+ There are no comments
Add yours