Ananth Kumar Hegade: ಸಂಸ್ಕೃತಿ, ಸಭ್ಯತೆ ಅಂದ್ರೆ ಏನು ಅಂತೆ ಚರ್ಚೆ ಮಾಡೋಣ ಬನ್ನಿ; ಸಿಎಂಗೆ ಹೆಗಡೆ ಸವಾಲು

1 min read

ಕಾರವಾರ: ಸಿಎಂ ಸಿದ್ದರಾಮಯ್ಯ (CM Siddaramaiah) ವಿರುದ್ಧ ನೀಡಿದ ಹೇಳಿಕೆಯ ಕುರಿತು ಸಂಸದ ಅನಂತ್ ಕುಮಾರ್ ಹೆಗಡೆ (MP Ananthkumar Hegade) ಶಿರಸಿಯಲ್ಲಿ ಪ್ರತಿಕ್ರಿಯೆ ನೀಡಿದರು. ನಾನು ಹೇಳಿದಷ್ಟನ್ನು ರೆಕಾರ್ಡ್ ಮಾಡಿಕೊಳ್ಳಿ ಹಂಗೆ ಹಾಕಿಕೊಳ್ಳಿ. ನೀವು ನನ್ನ ಹೇಳಿಕೆಯನ್ನು ಕಟ್ ಮಾಡಿದ್ರೆ ನಾನು ನನ್ನ ಸೋಶಿಯಲ್ ಮಿಡಿಯಾದಲ್ಲಿ ಅಪ್ಲೋಡ್ ಮಾಡುತ್ತೇನೆ ಎಂದು ಹೇಳುತ್ತಲೇ ಮಾಧ್ಯಮಗಳ ಜೊತೆ ಮಾತು ಆರಂಭಿಸಿದರು. ನನ್ನ ಹೇಳಿಕೆಯನ್ನು ಖಂಡಿಸುವುದು ಸಹಜ. ಇದು ನನ್ನ ವೈಯಕ್ತಿ ಹೇಳಿಕೆ, ಇದು ಪಕ್ಷದ ಹೇಳಿಕೆ ಅಲ್ಲ ಎಂದು ಸ್ಪಷ್ಟನೆ ನೀಡಿದರು. ಬಿವೈ ವಿಜಯೇಂದ್ರ (BY Vijayendra) ಹೇಳಿರುವ ಮಾತು ಸರಿ ಇದೆ ಎಂದರು.

ಸಂಸ್ಕೃತಿ ಬಗ್ಗೆ ಸಿಎಂ ಸಿದ್ದರಾಮಯ್ಯ ನನ್ನ ಎದುರು ಬಂದು ಮಾತನಾಡಲಿ. ಇದರ ಎಲ್ಲದರ ಬಗ್ಗೆ ನಾವಿಬ್ರೂ ಕುತ್ಕೊಂಡು ಜನರ ಮುಂದೆ ಚರ್ಚೆ ಮಾಡೋಣ. ಎಲ್ಲೋ ಕುತ್ಕೊಂಡು ಸಭೆಯಲ್ಲಿ ಮಾತನಾಡುವುದು ಸರಿ ಅಲ್ಲ ಎಂದು ಹೇಳಿದರು.

ಎಲ್ಲದಕ್ಕೂ ದಾಖಲೆಗಳಿವೆ

ನಮ್ಮ ಪ್ರಧಾನಿ ಮೋದಿ, ಅಮಿತ್ ಶಾ ಬಗ್ಗೆ ಯಾರೆಲ್ಲಾ ಏನೇನ್ ಮಾತಾಡಿದಾರೆ ಹೇಳಬೇಕಾ? ಶರದ್ ಪವಾರ ಮೋದಿಯರನ್ನು ಹಿಟ್ಲರ್ ಅಂತಾ ಕರೆದರು. ಕಾಂಗ್ರೆಸ್ ಬಹುತೇಕ ನಾಯಕರು ಇವರನ್ನು ಹಿಟ್ಲರ್ ಎಂದು ಕರೆದರು. ಇದಕ್ಕೆಲ್ಲಾ ಮಿಡಿಯಾದೇ ದಾಖಲೆಗಳು ಇವೆ.

ಸಿಎಂ ಸಿದ್ದರಾಮಯ್ಯ ಮೋದಿಯವರನ್ನು ಏಕವಚನದಲ್ಲಿ ಮಾಸ್ ಮರ್ಡರರ್ ಎಂದು ಕರೆದರು. ಇದು ನನ್ನ ಪ್ರಧಾನಿ, ನನ್ನ ದೇಶ ನನ್ನ ಧರ್ಮದ ಬಗ್ಗೆ ಹೇಳಿರುವ ಹೇಳಿಕೆಯಲ್ಲಿ ಯಾವುದೇ ಹಿಂಜರಿಕೆ ಇಲ್ಲ. ದಿಗ್ವಿಜಯ ಸಿಂಗ್ ಮೋದಿಯವರನ್ನ ರಾವಣ ಅಂತಾ ಕರೆದರೆ, ಜಯರಾಂ ರಮೇಶ್ ಭಸ್ಮಾಸುರ, ಮನೀಶ್ ಅಯ್ಯರ್ ವಿಷ ಸರ್ಪ ಅಂತಾ ಕರೆದರು ಎಂದು ಹಳೆ ಹೇಳಿಕೆಗಳನ್ನು ಉದಾಹರಣೆಯನ್ನಾಗಿ ನೀಡಿದರು.

ನಮಗೊಂದು ನ್ಯಾಯಾನಾ?

ಕಾಂಗ್ರೆಸ್ ನಾಯಕರು ಎಲ್ಲರೂ ನನ್ನ ಮುಂದೆ ಬಂದು ಸಂಸ್ಕೃತಿ ಬಗ್ಗೆ ಚರ್ಚೆ ಮಾಡಲಿ. ಸಭ್ಯತೆ ಅಂದ್ರೆ ಏನು ಅಂತಾ ನಾನು ಪಾಠ ಮಾಡ್ತೀನಿ. ಏನೂ ಮಾತನಾಡಬೇಕು ಅಂತಾ ನಾನು ಹೇಳುವೆ. ಯಾರಿಗೆ ಯಾವ ಭಾಷೆಯಲ್ಲಿ ಹೇಗೆ ಮಾತಾಡಬೇಕು ಹಾಗೆ ಮಾತಾಡಬೇಕು. ಅವರಿಗೊಂದು ನ್ಯಾಯ? ನಮಗೊಂದು ನ್ಯಾಯಾನಾ ಎಂದು ಪ್ರಶ್ನೆ ಮಾಡಿದರು.

ಯಾರಿಗೆ ಹೇಗೆ ಮಾತಾಡಬೇಕು ಅನ್ನೋದು ನಮಗೆ ಗೊತ್ತು. ರಾಮಮಂದಿರ ಬಗ್ಗೆ ಎಷ್ಟು ಅವಹೇಳನಕಾರಿಯಾಗಿ ಮಾತಾಡಿದ್ರು. ಎಷ್ಟು ಕೀಳಾಗಿ ಹಿಂದೂ ಸಮಾಜದ ಬಗ್ಗೆ ಮಾತಾಡಿದ್ರು.

ಹೇಳಿಕೆಯನ್ನು ಸಮರ್ಥಿಸಿಕೊಂಡ ಹೆಗಡೆ

ಹಿಂದೂ ಸಮಾಜ ಅಂದ್ರೆ ಬೇವರ್ಸಿ ಸಮಾಜಾನಾ? 20% ಮತಕ್ಕಾಗಿ ಎಷ್ಟೊಂದು ಜೊಲ್ಲೂ ಸುರಿಸುತ್ತಾ ಮಾತನಾಡುತ್ತಾರೆ. 80% ರಿಂದ 85% ಇರುವ ಹಿಂದೂ ಸಮಾಜದ ಬಗ್ಗೆ ನಿಮಗೆ ಗೌರವ ಯಾಕಿಲ್ಲ. ನನ್ನ ಧ್ವನಿ ಇದೆ ಏಕವಚನದಲ್ಲಿ ನೀವೂ ಮಾತನಾಡಿದ್ದೂ ಸರಿ ಆಗಿದ್ರೆ, ನಾನು ಮಾತನಾಡಿದ್ದೂ ಕೂಡಾ ಸರಿ ಎಂದು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡರು.

ಎಲ್ಲದಕ್ಕೂ ಉತ್ತರ ಕೊಡುವೆ

ಯಾರೂ ನನ್ನ ಒಪ್ಕೊತಾರೆ ಬಿಡ್ತಾರೊ ಗೊತ್ತಿಲ್ಲ, ಆ ದೇವರು ಮತ್ತು ಹಿಂದೂ ಸಮಾಜದ ಜನರು ನನ್ನ ಮಾತುಗಳನ್ನು ಒಪ್ಕೊಳ್ತಾರೆ. ನಾಲ್ಕೂವರೆ ವರ್ಷ ಎಲ್ಲಿದ್ರು? ಕುಂಭಕರ್ಣ ಎಂಬ ಕಾಂಗ್ರೆಸ್ ಟೀಕೆ ಮಾಡಿರುವ ವಿಚಾರಕ್ಕೆ ಅದಕ್ಕೆಲ್ಲಾ ನಾನು ಮುಂದಿನ ದಿನಗಳಲ್ಲಿ ಉತ್ತರ ಕೊಡ್ತೇನೆ. ಎಲ್ಲದಕ್ಕೂ ಉತ್ತರ ಕೊಡ್ತೇನೆ, ಯಾವುದಕ್ಕೂ ಬಡ್ಡಿ ಗಿಡ್ಡಿ ಇಟ್ಟಿಕೊಳ್ಳುವ ಪ್ರಶ್ನೆ ಇಲ್ಲ ಎಂದು ವಾಗ್ದಾಳಿ ನಡೆಸಿದರು.

You May Also Like

More From Author

+ There are no comments

Add yours