ಬೆಂಗಳೂರು: ರಾಮೇಶ್ವರಂ ಕೆಫೆಯಲ್ಲಿ (Rameshwaram Cafe) ಸ್ಫೋಟಕವನ್ನಿಟ್ಟಿದ್ದವನ ಜೊತೆ ಮತ್ತೋರ್ವ ವ್ಯಕ್ತಿ ಇದ್ದುದು ಗೊತ್ತಾಗಿದೆ. ತಮಿಳುನಾಡಿನಲ್ಲಿ (Tamil Nadu) ಉಳಿದಿದ್ದ ಶಂಕಿತನ ಜೊತೆಗಿದ್ದ ಮತ್ತೋರ್ವ ವ್ಯಕ್ತಿ, ಸ್ಪೋಟಕ್ಕೂ ಮುನ್ನ ಓಡಾಡಿರೋದು ಎನ್‌ಐಎಗೆ (NIA) ಗೊತ್ತಾಗಿದೆ. ಈ ವೇಳೆ ಶಂಕಿತ ತಮಿಳುನಾಡಿನಿಂದ ಬಂದಿರೊದು ಕೂಡ ಪತ್ತೆಯಾಗಿದೆ. ಸ್ಪೋಟದ ವೇಳೆ ಶಂಕಿತ ಉಗ್ರ ಧರಿಸಿದ್ದ ಟೋಪಿಯ (Cap) ಮೂಲವನ್ನೂ ಎನ್‌ಐಎ ಪತ್ತೆಹಚ್ಚಿದೆ. ತಮಿಳು ನಾಡಿನ ಮಾಲ್ ಒಂದರಲ್ಲಿ ಆ ಕ್ಯಾಪ್ ಖರೀದಿಸಿರೋದು ಗೊತ್ತಾಗಿದೆ. ಟೋಪಿ ಖರೀದಿ ವೇಳೆ ಇಬ್ಬರ ಮುಖ ಚಹರೆ (Facial Recognition) ಸಮೇತ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮತ್ತೊಂದ್ಕಡೆ ಎನ್‌ಐಎ ವಶಪಡಿಸಿಕೊಂಡಿರುವ ಕ್ಯಾಪ್‌ನಲ್ಲಿ ಶಂಕಿತ ಉಗ್ರನ ಕೂದಲು ಪತ್ತೆಯಾಗಿದ್ದು, ಅದನ್ನ ಡಿಎನ್‌ಎ ಟೆಸ್ಟ್‌ಗೆ (DNA Tets) ಒಳಪಡಿಸಲು ಮುಂದಾಗಿದೆ.
ತಮಿಳುನಾಡು ಸೇರಿ ದೇಶದ 7 ಸ್ಥಳಗಳ ಮೇಲೆ NIA ದಾಳಿ!
ಇತ್ತ ಬೆಂಗಳೂರಿನಲ್ಲಿ ರಾಮೇಶ್ವರಂ ಕೆಫೆ ಕೇಸ್ ತನಿಖೆ ಕೈಗೆತ್ತಿಕೊಂಡಿದ್ದ ಎನ್ಐಎ ಅಧಿಕಾರಿಗಳು ತಮಿಳುನಾಡಿನ ಎರಡು ಸ್ಥಳಗಳು ಸೇರಿದಂತೆ ದೇಶದ 7 ಕಡೆ ದಾಳಿ ಮಾಡಿದ್ದರು. ಚೆನ್ನೈನ ಮಣ್ಣಾಡಿಯ ಮುತ್ಯಾಲಪೇಟೆ, ರಾಮನಾಥಪುರಂ ಕೀಳಕ್ಕರೈ ಎಂಬ ಸ್ಥಳದಲ್ಲಿ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದರು. ಈ ದಾಳಿಯಲ್ಲಿ ರಾಮೇಶ್ವರಂ ಕೆಫೆ ಸ್ಫೋಟದ ತನಿಖೆಯೂ ಭಾಗವಾಗಿದ್ಯಂತೆ. ಈ ಹಿಂದೆಯೂ ಇದೇ ಏರಿಯಾದಲ್ಲಿ ದಾಳಿ ನಡೆಸಿದ್ದ ಎನ್ ಐಎ ಅಧಿಕಾರಿಗಳು ಹಲವರನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದರು.
2020ರಿಂದ NIA ವಾಟೆಂಡ್ ಲೀಸ್ಟ್‌ನಲ್ಲಿ ಇದ್ದ ಶಂಕಿತ
NIA ಅಧಿಕಾರಿಗಳ ಮಾಹಿತಿ ಪ್ರಕಾರ, ಈಗಾಗಲೇ ಬಾಂಬರ್ ಗುರುತು ಪತ್ತೆ ಆಗಿದೆ. ಹೈದ್ರಾಬಾದ್ ಹಾಗೂ ಮಹಾರಾಷ್ಟ್ರದಲ್ಲಿ ಬಾಂಬರ್‌ಗಾಗಿ ಶೋಧ ನಡೆಯುತ್ತಿದೆ. ಯಾವ ವ್ಯಕ್ತಿ ಬಾಂಬ್ ಇಟ್ಟಿರೋದು ಕನ್ಫರ್ಮ್ ಆಗಿದ್ದು, ಆತ ಯಾರು? ಆತನ ಹೆಸರೇನು? ಊರಿನ ಮಾಹಿತಿಯನ್ನು ಟ್ರೇಸ್ ಮಾಡಿದ್ದು, ಬಂಧನಕ್ಕೆ ಬಲೆ ಬೀಸಿದೆ.
ಸ್ಫೋಟಕ್ಕೆ ಅಮೋನಿಯಂ ನೈಟ್ರೇಟ್ ಬಳಕೆ?
ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಪೋಟ ಪ್ರಕರಣದ ತನಿಖೆಯನ್ನ ಎನ್‌ಐಎ ಅಧಿಕಾರಿಗಳು ತೀವ್ರಗೊಳಿಸಿದ್ದಾರೆ. ಕೆಫೆ ಬ್ಲಾಸ್ಟ್‌ಗೆ ಅಮೋನಿಯಂ ನೈಟ್ರೇಟ್ ಪೌಡರನ್ನು ಬಳಸಿದ್ದಾನೆ ಎಂದು ತನಿಖೆಯಲ್ಲಿ ದೃಢಪಟ್ಟಿದೆ. ಅಮೋನಿಯಂ ನೈಟ್ರೇಟ್ ಸಾರ್ವಜನಿಕವಾಗಿ ಮಾರಾಟ ನಿಷೇಧ ಮಾಡಲಾಗಿದೆ. ಅಮೋನಿಯಂ ನೈಟ್ರೇಟ್ ಅನ್ನ ಕಲ್ಲು ಬಂಡೆಗಳನ್ನ ಸಿಡಿಸಲು ಬಳಸಲಾಗುತ್ತೆ. ರಾಜ್ಯ ಹಾಗೂ ಹೊರ ರಾಜ್ಯಗಳಲ್ಲಿ ಅಮೋನಿಯಂ ನೈಟ್ರೇಟ್ ಪೂರೈಕೆದಾರರ ಕುರಿತು NIA ತೀವ್ರ ತನಿಖೆ ನಡೆಸ್ತಿದೆ.
+ There are no comments
Add yours