ಹೈಲೈಟ್ಸ್:
- ತಮಗೆ ಲಭ್ಯ ಇರುವ ಭದ್ರತಾ ವ್ಯವಸ್ಥೆಗಳು ಏನು ಎಂದು ಕೇಳಿದ್ದ ಜಶೋದಾಬೆನ್
- ಈ ಕುರಿತಾದ ಮಾಹಿತಿಯನ್ನ 2014ರಲ್ಲಿ ಜಶೋದಾಬೆನ್ ಅವರು ಆರ್ಟಿಐ ಮೂಲಕ ಕೇಳಿದ್ದರು
- ಇದಕ್ಕೆ ಸಿಕ್ಕ ಉತ್ತರವನ್ನು ಮಾಧ್ಯಮಗಳ ಎದುರು ಪ್ರದರ್ಶನ ಮಾಡಿದ್ದ ಫೋಟೋವನ್ನು ಈಗ ತಿರುಚಲಾಗಿದೆ!
ಪ್ರಧಾನಿ ಮೋದಿ ಅವರಿಂದ ದೂರ ಆಗಿರುವ ಅವರ ಪತ್ನಿ ಜಶೋದಾಬೆನ್ ಮೋದಿ ಅವರು ಪೋಸ್ಟರ್ ಒಂದನ್ನು ತಮ್ಮ ಕೈನಲ್ಲಿ ಹಿಡಿದಿರುವ ಫೋಟೋ ಒಂದು ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ‘ಪ್ರಧಾನಿ ಮೋದಿ ಅವರು ಮೊದಲ ಗ್ಯಾರಂಟಿ ಕೊಟ್ಟಿದ್ದು ನನಗೆ. ಮಿಕ್ಕಂತೆ ನೀವು ಬುದ್ದಿವಂತರಿದ್ದೀರಿ’ (ಅರ್ಥ ಮಾಡಿಕೊಳ್ಳುತ್ತೀರಿ) ಎಂದು ಬರೆಯಲಾಗಿದ್ದ ಪೋಸ್ಟರ್ ಅನ್ನು ಜಶೋದಾಬೆನ್ ಅವರು ಕೈನಲ್ಲಿ ಹಿಡಿದಿರುವ ಫೋಟೋ ಅದು.

+ There are no comments
Add yours