ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (PM Narendra Modi) ಮೂರನೇ ಬಾರಿ ವಾರಣಾಸಿ ಲೋಕಸಭಾ ಕ್ಷೇತ್ರದಿಂದ (Varanasi Lok Sabha Constituency) ಸ್ಪರ್ಧೆ ಮಾಡುತ್ತಿದ್ದಾರೆ. ಮೇ 14ರಂದು ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ. ಕಳೆದ ಎರಡು ತಿಂಗಳಿನಿಂದ ನಿರಂತರವಾಗಿ ಪ್ರಧಾನಿಗಳು ಚುನಾವಣೆ ಪ್ರಚಾರ (Election Campaign) ನಡೆಸುತ್ತಿದ್ದಾರೆ. ಎರಡು ತಿಂಗಳಲ್ಲಿ 141 ರ್‍ಯಾಲಿ (Rally) ಹಾಗೂ ಹಲವು ರೋಡ್ಶೋಗಳಲ್ಲಿ (Road Show) ಪ್ರಧಾನಿಗಳು ಭಾಗಿಯಾಗಿದ್ದಾರೆ. 73ನೇ ವಯಸ್ಸಿನಲ್ಲಿ ಪ್ರಧಾನಿಗಳ ಈ ಉತ್ಸಾಹ ಕಂಡ ಬಿಜೆಪಿಗರು ಏಜ್ ಈಸ್ ಜಸ್ಟ್ ನಂಬರ್ ಎಂದು ಹೇಳುತ್ತಿದ್ದಾರೆ. ಪ್ರತಿದಿನ ಸಾವಿರಾರು ಕಿಲೋ ಮೀಟರ್ ಪ್ರಯಾಣ, ಮೂರು ಸಾರ್ವಜನಿಕ ಸಭೆಗಳಲ್ಲಿ ಪಿಎಂ ಮೋದಿ ಭಾಗಿಯಾಗುತ್ತಿದ್ದಾರೆ.
ಭಾನುವಾರ ಪ್ರಧಾನಿಯವರು ಪಶ್ಚಿಮ ಬಂಗಾಳದಲ್ಲಿ ನಾಲ್ಕು ರ್ಯಾಲಿಗಳನ್ನು ಮಾಡುತ್ತಾರೆ. ನಂತರ ಪಾಟ್ನಾದಲ್ಲಿ ರೋಡ್‌ಶೋ ಮಾಡುತ್ತಾರೆ. ಸೋಮವಾರ ವಾರಣಾಸಿಗೆ ತೆರಳುವ ಮೊದಲು ಪಾಟ್ನಾದಲ್ಲಿ ಮೂರು ರ್ಯಾಲಿಗಳಲ್ಲಿ ಭಾಗವಹಿಸುತ್ತಾರೆ. ನಂತರ ಸಂಜೆ ನಾಲ್ಕು ಗಂಟೆಗೆ ಬೃಹತ್ ರೋಡ್‌ಶೋನಲ್ಲಿ ಭಾಗವಹಿಸಲಿದ್ದಾರೆ.
ಮಂಗಳವಾರ ಬೆಳಗ್ಗೆ ಪ್ರಧಾನಿ ವಾರಣಾಸಿಯಿಂದ ನಾಮಪತ್ರ ಸಲ್ಲಿಸಲಿದ್ದಾರೆ. ಪ್ರಧಾನಿಯವರ ಪ್ರಚಾರವು ಮೇ ಅಂತ್ಯದವರೆಗೆ ಮುಂದುವರಿಯುತ್ತದೆ. ಒಟ್ಟು 180-190 ಕಾರ್ಯಕ್ರಮಗಳಲ್ಲಿ ಪ್ರಧಾನಿಗಳ ಭಾಗಿಯಾಗುವ ಸಾಧ್ಯತೆಗಳಿವೆ.
ಮೂರನೇ ಅವಧಿಗೆ ಮೋದಿಯೇ ಪ್ರಧಾನಿ
ಮೋದಿ 75ನೇ ವಯಸ್ಸಿನಲ್ಲಿ ನಿವೃತ್ತಿ ಹೊಂದಲಿದ್ದು, ಅಮಿತ್ ಶಾ ಅವರಿಗೆ ಅಧಿಕಾರ ಹಸ್ತಾಂತರಿಸಲಿದ್ದಾರೆ ಎಂದು ಎಎಪಿ ನಾಯಕ, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆ ಬೆನ್ನಲ್ಲೇ ಅಮಿತ್ ಶಾ ಸ್ಪಷ್ಟನೆ ನೀಡಿದ್ದಾರೆ.
2029ರಲ್ಲಿ ಮೋದಿ ಅವರು ಮೂರನೇ ಅವಧಿ ಪೂರ್ಣಗೊಳಿಸಲಿದ್ದು, ಮುಂದೆಯೂ ಪಕ್ಷ ಮತ್ತು ದೇಶವನ್ನು ಮುನ್ನಡೆಸಲಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಶನಿವಾರ ಹೇಳಿದ್ದಾರೆ. ಈ ವಿಚಾರದಲ್ಲಿ ಪಕ್ಷದೊಳಗೆ ಯಾವುದೇ ಗೊಂದಲವಿಲ್ಲ ಎಂದು ಗೃಹ ಸಚಿವ ಅಮಿತ್ ಶಾ ಮಾಹಿತಿ ನೀಡಿದ್ದಾರೆ.
ಎರಡು ದಿನ ವಾರಣಾಸಿಯ ಭೇಟಿ
ಪ್ರಧಾನಿ ಮೋದಿಯವರ ರೋಡ್‌ಶೋ ಮತ್ತು ನಾಮನಿರ್ದೇಶನ ಪ್ರಕ್ರಿಯೆಯ ವ್ಯವಸ್ಥೆಗಳ ಮೇಲ್ವಿಚಾರಣೆಗಾಗಿ ಗೃಹ ಸಚಿವ ಅಮಿತ್ ಶಾ ವಾರಾಣಸಿಯಲ್ಲಿದ್ದಾರೆ. ಬಿಜೆಪಿಯ ಹಿರಿಯ ನಾಯಕ ಸುನಿಲ್ ಬನ್ಸಾಲ್ ಕೂಡ ವಾರಣಾಸಿಯಲ್ಲಿ ಹಲವು ದಿನಗಳಿಂದ ಬೀಡು ಬಿಟ್ಟಿದ್ದಾರೆ. ವಾರಣಾಸಿಗೆ ಎರಡು ದಿನಗಳ ಭೇಟಿಯ ವೇಳೆ ಪ್ರಧಾನಿಗಳು ಕಾಶಿ ವಿಶ್ವನಾಥ ದೇವಾಲಯ ಮತ್ತು ಕಾಲ ಭೈರವ ದೇವಾಲಯಕ್ಕೆ ಭೇಟಿ ನೀಡುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ.
ಬೃಹತ್ ರೋಡ್‌ಶೋ
ಮೋದಿಯವರನ್ನು ಸ್ವಾಗತಿಸಲು ಗುಜರಾತಿ, ಮರಾಠಿ, ತಮಿಳು, ಬೆಂಗಾಲಿ, ಪಂಜಾಬಿ ಮತ್ತು ಇತರ ಸಮುದಾಯಗಳ ಜನರು ಪ್ರಧಾನಿಯವರ ರೋಡ್‌ಶೋ ಮಾರ್ಗದಲ್ಲಿ ಭಾರತದ ವೈವಿಧ್ಯತೆಯನ್ನು ವಿವಿಧ ಹಂತಗಳಲ್ಲಿ ಪ್ರದರ್ಶಿಸಲಾಗುತ್ತದೆ. ರೋಡ್‌ಶೋ ಸಮಯದಲ್ಲಿ, ಪ್ರಧಾನಿಯವರು ಬನಾರಸ್ ಹಿಂದೂ ವಿಶ್ವವಿದ್ಯಾಲಯದ (ಬಿಎಚ್‌ಯು) ಗೇಟ್‌ನಿಂದ ಕಾಶಿ ವಿಶ್ವನಾಥ ಕಾರಿಡಾರ್‌ವರೆಗಿನ ಐದು ಕಿಲೋಮೀಟರ್ ವ್ಯಾಪ್ತಿಯನ್ನು ಸರಿಸುಮಾರು ನಾಲ್ಕು ಗಂಟೆಗಳಲ್ಲಿ ಕ್ರಮಿಸಲಿದ್ದಾರೆ.
ರೋಡ್‌ಶೋದಲ್ಲಿ ವಿವಿಧ ಕಲಾವಿದರು ಡಮರುಗ ಮತ್ತು ಶಂಖಗಳನ್ನು ನುಡಿಸಲಾಗುತ್ತದೆ.ಈ ರೋಡ್ ಶೋ ಕಾರ್ಯಕ್ರಮಕ್ಕಾಗಿ ಬಿಜೆಪಿ ಕ್ವಿಂಟಾಲ್ಗಟ್ಟಲ್ಲೇ ಹೂವಿನ ದಳಗಳನ್ನು ಬಳಕೆ ಮಾಡಲಾಗಿದೆ. ಪ್ರಧಾನಿ ನಾಮನಿರ್ದೇಶನಕ್ಕೆ ಸಂಭಾವ್ಯ ಪ್ರಸ್ತಾಪಕರ ಪಟ್ಟಿಯನ್ನು ರಚಿಸಲಾಗಿದೆ ಮತ್ತು ಅದರಲ್ಲಿ ನಾಲ್ಕು ಹೆಸರುಗಳನ್ನು ಅಂತಿಮಗೊಳಿಸಲಾಗುತ್ತದೆ.
+ There are no comments
Add yours