ಐಕಾನಿಕ್ ಸ್ಟಾರ್ ಅಲ್ಲು ಅರ್ಜುನ್ (Allu Arjun) ಅಭಿನಯದ ಪುಷ್ಪ 2 ಸಿನಿಮಾವನ್ನು ತೆರೆ ಮೇಲೆ ನೋಡಲು ಪ್ರೇಕ್ಷಕರು ಕಾತರದಿಂದ ಕಾಯುತ್ತಿದ್ದಾರೆ. ಬಹುದಿನಗಳ ಕಾಯುವಿಕೆಯ ನಂತರ ಪುಷ್ಪ 2 ಚಿತ್ರದ ಬಿಡುಗಡೆ ದಿನಾಂಕ ಘೋಷಣೆಯಾಗಿತ್ತು. ಪುಷ್ಪ 2 ಸಿನಿಮಾ (Pushpa 2 Movie) 2024 ಆಗಸ್ಟ್ 15 ರಂದು ವಿಶ್ವದಾದ್ಯಂತ ರಿಲೀಸ್ ಆಗಲಿದೆ ಎಂದು ಚಿತ್ರತಂಡ ಘೋಷಣೆ ಮಾಡಿತ್ತು. ಆದ್ರೆ ಇದೀಗ ಹೊಸ ರೂಮರ್ಸ್ ಒಂದು ಸೋಶಿಯಲ್ ಮೀಡಿಯಾದಲ್ಲಿ (Social Media) ಹರಿದಾಡ್ತಿದೆ. ಪುಷ್ಪ 2 ಸಿನಿಮಾ ರಿಲೀಸ್ ಡೇಟ್ (Pushpa 2 Release Date) ಮುಂದೂಡುವ ಸಾಧ್ಯತೆ ಇದೆ ಎನ್ನುವ ಸುದ್ದಿ ಹೊರಬಿದ್ದಿದೆ.
ಕಂಪ್ಲೀಟ್ ಆಗಿಲ್ಲ ಪುಷ್ಪ 2 ಸಿನಿಮಾ ಶೂಟಿಂಗ್!
ಪುಷ್ಪ 2 ಸಿನಿಮಾ ರಿಲೀಸ್ ಡೇಟ್ ಮುಂದೂಡಿಕೆಯ ಸುದ್ದಿ ಕೇಳಿ ಅಲ್ಲು ಅರ್ಜುನ್ ಫ್ಯಾನ್ಸ್ ಶಾಕ್ ಆಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ಸುದ್ದಿ ಹರಿದಾಡಲು ಪ್ರಮುಖ ಕಾರಣ ಕೂಡ ಇದೆ. ಚಿತ್ರದ ಶೂಟಿಂಗ್ ಇನ್ನು ಕಂಪ್ಲೀಟ್ ಆಗಿಲ್ಲ. ಅಲ್ಲು ಅರ್ಜುನ್ ಮೇ ತಿಂಗಳ ಕೊನೆಯವರೆಗೂ ಪುಷ್ಪ 2 ಸಿನಿಮಾ ಶೂಟಿಂಗ್ ಮಾಡಲಿದ್ದಾರೆ. ಜೂನ್ ತಿಂಗಳಲ್ಲೂ ಬನ್ನಿ ಶೂಟಿಂಗ್ ಶೆಡ್ಯೂಲ್ ಆಗಿದೆ. ಪುಷ್ಪ 2 ಸಿನಿಮಾ ಶೂಟಿಂಗ್ ಇನ್ನು 1 ತಿಂಗಳ ಕಾಲ ನಡೆಯಲಿದೆ ಎನ್ನುವ ಸುದ್ದಿ ವೈರಲ್ ಆಗಿದೆ. ಹೀಗಾಗಿ ಆಗಸ್ಟ್ 15ರ ಒಳಗೆ ಸಿನಿಮಾ ಕೆಲಸ ಕಂಪ್ಲೀಟ್ ಆಗುತ್ತಾ ಎಂದು ಫ್ಯಾನ್ಸ್ ಕೇಳ್ತಿದ್ದಾರೆ.
ಸಿನಿಮಾ ಸಂಕಲನಕಾರರ ಬದಲಾವಣೆ!
ಪುಷ್ಪ 2 ಚಿತ್ರದ ಮುಖ್ಯ ಸಂಕಲನಕಾರರ ಚಿತ್ರದಿಂದ ಹಿಂದೆ ಸರಿದಿದ್ದಾರೆ ಎಂದು ವರದಿಯಾಗಿದೆ. ಆಂಟೊನಿ ರೂಬೆನ್ ಈ ಚಿತ್ರದ ಸಂಕಲನಕಾರರಾಗಿದ್ದರು. ಆದರೆ ಅವರು ಸಿನಿಮಾದಿಂದ ಹಿಂದೆ ಸರಿದಿರುವುದರಿಂದ ಸಿನಿಮಾ ರಿಲೀಸ್ ಡೇಟ್ ಮುಂದಕ್ಕೆ ಹೋಗಲಿದೆ ಎಂದು ಹೇಳಲಾಗ್ತಿದೆ. ಸಂಕಲನಕಾರರ ಆಂಟೋನಿ ರೂಬೆನ್ ಅವರು ಪುಷ್ಪ, ಜವಾನ್, ಬಿಗಿಲ್ ಮತ್ತು ಮೆರ್ಸಲ್‌ನಂತಹ ಅನೇಕ ಬ್ಲಾಕ್‌ಬಸ್ಟರ್ ಚಲನಚಿತ್ರಗಳ ಎಡಿಟಿಂಗ್ ಕೆಲಸ ಮಾಡಿದ್ದಾರೆ.
ಪುಷ್ಪ 2 ಸಿನಿಮಾ ರಿಲೀಸ್ ಡೇಟ್ ಮುಂದೂಡುವ ಸಾಧ್ಯತೆ
ಸೋಶಿಯಲ್ ಮೀಡಿಯಾದಲ್ಲಿ ಹರಿದಾಡ್ತಿರುವ ಮಾಹಿತಿ ಪ್ರಕಾರ ನಿರ್ದೇಶಕ ಅಟ್ಲೀ ಕುಮಾರ್ ಅವರ ಹೊಸ ಸಿನಿಮಾದ ಕಾರಣದಿಂದ ಆಂಟೋನಿ ಅವರು ಪುಷ್ಪ 2 ಚಿತ್ರದಿಂದ ಹಿಂದೆ ಸರಿದಿದ್ದಾರೆ ಎನ್ನಲಾಗಿದೆ. ವರುಣ್ ಧವನ್ ಅವರ ಬೇಬಿ ಜಾನ್ ಚಿತ್ರಕ್ಕೆ ಆಂಟೋನಿ ಕೆಲಸ ಮಾಡುತ್ತಿದ್ದಾರೆ. ಹಾಗಾಗಿ ಪುಷ್ಪ 2 ಚಿತ್ರಕ್ಕೆ ಸಮಯ ಮೀಸಲಿಡಲು ಸಾಧ್ಯವಾಗುತ್ತಿಲ್ಲ ಎನ್ನಲಾಗಿದೆ. ಹೀಗಾಗಿ ಸಿನಿಮಾ ರಿಲೀಸ್ ಡೇಟ್ ಮುಂದಕ್ಕೆ ಹೋಗುವ ಎಲ್ಲಾ ಸಾಧ್ಯತೆ ಇದೆ ಎಂದು ಹೇಳ್ತಿದ್ದಾರೆ. ಸುದ್ದಿ ಕೇಳಿ ಅಲ್ಲು ಅರ್ಜುನ್ ಫ್ಯಾನ್ಸ್ ಬೇಸರ ಹೊರಹಾಕಿದ್ದಾರೆ. ಈ ವರ್ಷ ಲೋಕಸಭಾ ಚುನಾವಣೆಯ ಎಲೆಕ್ಷನ್ ಸಲುವಾಗಿ ಅನೇಕ ಸಿನಿಮಾಗಳ ರಿಲೀಸ್ ಡೇಟ್ ಕೂಡ ಬದಲಾಗುತ್ತಿದೆ.
ಪುಷ್ಪರಾಜ್ಗೆ ನಟಿ ರಶ್ಮಿಕಾ ಮಂದಣ್ಣ ನಾಯಕಿ
ಪುಷ್ಪ 2 ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಫಹಾದ್ ಫಾಜಿಲ್, ಜಗಪತಿ ಬಾಬು, ಪ್ರಕಾಶ್ ರಾಜ್, ಸುನೀಲ್ ಮತ್ತು ಅನಸೂಯಾ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಮೈತ್ರಿ ಮೂವೀ ಮೇಕರ್ಸ್ ಬ್ಯಾನರ್ ಅಡಿಯಲ್ಲಿ ನವೀನ್ ಯೆರ್ನೇನಿ ಮತ್ತು ರವಿಶಂಕರ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ದೇವಿ ಶ್ರೀಪ್ರಸಾದ್ ಸಂಗೀತ ಸಂಯೋಜಿಸುತ್ತಿದ್ದಾರೆ. ಅನೌನ್ಸ್ ಮಾಡಿದಂತೆ ಸಿನಿಮಾ ಆಗಸ್ಟ್ 15ರಂದೇ ತೆರೆಗೆ ಬರಲಿ ಎಂದು ಅಭಿಮಾನಿಗಳು ಕೇಳಿಕೊಳ್ತಿದ್ದಾರೆ.
+ There are no comments
Add yours