ಅಬ್ಬಬ್ಬಾ ಬೀನ್ಸ್ ಬೆಲೆಯೇ! ರೇಟ್ ಕೇಳಿದ ಗ್ರಾಹಕರಿಗೆ ಶಾಕ್!: ಉಳಿದ ತರಕಾರಿಗಳ ದರವೂ ಏರುಗತಿಯಲ್ಲಿ

1 min read

ಹೈಲೈಟ್ಸ್‌:

  • ಇದೇ ಮೊದಲ ಬಾರಿಗೆ ಮುನ್ನೂರರ ಗಡಿ ದಾಟಿದ ಬೀನ್ಸ್
  • ಬೆಂಗಳೂರಿನ ಮಾರುಕಟ್ಟೆಗಳಲ್ಲಿ ಬೀನ್ಸ್ ದರ 200ರಿಂದ 300 ರೂ
  • ಟೊಮೆಟೋ ಸೇರಿದಂತೆ ಮತ್ತಿತರ ತರಕಾರಿಗಳ ಬೆೆಲೆಗಳೂ ಗಗನಕ್ಕೆ

ಬೆಂಗಳೂರು: ಬೀನ್ಸ್‌ ಬೆಲೆ ಕೇಳಿದರೆ ಸಾಕು ಗ್ರಾಹಕರು ಬೆಚ್ಚಿ ಬೀಳುವಂತಾಗಿದೆ. ಇದೇ ಮೊದಲ ಬಾರಿಗೆ ಬೀನ್ಸ್‌ ತ್ರಿಶತಕದ ಗಡಿ ದಾಟಿದೆ! ಇದೇ ಮೊದಲ ಬಾರಿಗೆ ದಾಖಲೆ ಪ್ರಮಾಣದಲ್ಲಿ ಏರಿಕೆಯಾಗಿದೆ. ಕೆ.ಜಿ. ಬೀನ್ಸ್‌ ಬರೋಬ್ಬರಿ 200-320 ರೂ.ವರೆಗೆ ತಲುಪಿದೆ. ಕೆಂಗೇರಿ, ಹೆಬ್ಬಾಳ ಮತ್ತಿತರ ಬಡಾವಣೆಗಳಲ್ಲಿ ಕೆ.ಜಿ.ಗೆ 200 ರೂ. ಇದ್ದರೆ, ಜಯನಗರ ಮತ್ತಿತರ ಬಡಾವಣೆಗಳಲ್ಲಿ ಕೆ.ಜಿ.ಗೆ 320 ರೂ. ಇದೆ. ಬೀನ್ಸ್‌ ದರ ಹೆಚ್ಚೆಂದರೆ 80 ರಿಂದ 100 ರೂ. ಇರುತ್ತಿತ್ತು. ಈಗ ನೂರು, ಇನ್ನೂರಲ್ಲ, ಮುನ್ನೂರು ದಾಟಿರುವುದು ಗ್ರಾಹಕರನ್ನು ಬೆಚ್ಚಿ ಬೀಳಿಸಿದೆ.

ಫೆಬ್ರವರಿಯಿಂದಲೇ ಆರಂಭವಾದ ಬಿಸಿಲ ತಾಪಮಾನ ಮಾರ್ಚ್, ಏಪ್ರಿಲ್‌ನಲ್ಲಿ ತುತ್ತ ತುದಿಗೆ ತಲುಪಿತ್ತು. ಹೀಗಾಗಿ, ಅಕ ತಾಪಮಾನ ಒಂದೆಡೆಯಾದರೆ, ರಾಜ್ಯಾದ್ಯಂತ ಬರಗಾಲದಿಂದಾಗಿ ನೀರಿನ ಸಮಸ್ಯೆ ಉಲ್ಬಣಿಸಿತ್ತು. ಹಲವೆಡೆ ಬೋರ್‌ವೆಲ್‌ಗಳು ಬತ್ತಿ ಹೋಗಿದ್ದವು. ಹೀಗಾಗಿ, ತರಕಾರಿ ಬೆಳೆಗಳು ಕೆಲವೆಡೆ ಒಣಗುತ್ತಿವೆ. ಮತ್ತೆ ಕೆಲವೆಡೆ ಬೆಳೆಯಾದರೂ ಹೂ ಉದುರಲು ಅರಂಭಿಸಿತು. ಹೀಗಾಗಿ, ಬೀನ್ಸ್‌ನ ಉತ್ಪಾದನೆ ಪ್ರಮಾಣ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಯಿತು. ಇದೇ ಅವಯಲ್ಲಿ ಎಲ್ಲೆಡೆ ಮದುವೆ, ಗೃಹಪ್ರವೇಶ ಮತ್ತಿತರ ಶುಭ ಸಮಾರಂಭಗಳು ನಡೆದಿದ್ದರಿಂದ ಬೀನ್ಸ್‌ಗೆ ಹೆಚ್ಚಿನ ಬೇಡಿಕೆಯೂ ಬಂತು. ಆದರೆ, ಬೇಡಿಕೆಗೆ ತಕ್ಕಂತೆ ಪೂರೈಕೆಯಾಗದ ಹಿನ್ನೆಲೆಯಲ್ಲಿ ಬೆಲೆ ಏರಿಕೆಯಾಗಿ ಈಗ 300ರ ಗಡಿ ದಾಟಿದೆ.

You May Also Like

More From Author

+ There are no comments

Add yours