Jio Rail App ಮೂಲಕ ಟ್ರೈನ್ ಟಿಕೆಟ್ ಬುಕ್ ಮಾಡಿದರೆ ಕನ್ಫರ್ಮ್ ಟಿಕೆಟ್ ಗ್ಯಾರಂಟಿ !

1 min read

Jio Rail App : ದೇಶದ ಅತ್ಯಂತ ಹಿರಿಯ ಉದ್ಯಮಿ ಮುಖೇಶ್ ಅಂಬಾನಿ, ಕೈ ಹಾಕುವ ಪ್ರತಿಯೊಂದು ವಲಯದಲ್ಲೂ ಹೊಸ ಅಲೆಯನ್ನೇ ಎಬ್ಬಿಸಿ ಬಿಡುತ್ತಾರೆ. ಮುಖೇಶ್ ಅಂಬಾನಿ ಟೆಲಿಕಾಂ ಕ್ಷೇತ್ರವನ್ನು ಪ್ರವೇಶಿಸಿದಾಗ,ಇಡೀ ಮಾರುಕಟ್ಟೆಯನ್ನು ಬೆರಗುಗೊಳಿಸಿದ್ದರು. ಕೆಲವೇ ವರ್ಷಗಳಲ್ಲಿ ರಿಲಯನ್ಸ್ ಜಿಯೋ ಟೆಲಿಕಾಂ ಕ್ಷೇತ್ರವನ್ನೇ ಆಳುವ ಮಟ್ಟಕ್ಕೆ ಬೆಳೆಯಿತು.ಇಂದು ಜಿಯೋ ದೇಶಾದ್ಯಂತ 46 ಕೋಟಿಗೂ ಹೆಚ್ಚು ಬಳಕೆದಾರರನ್ನು ಹೊಂದಿದೆ.ಇದೀಗ ಮುಖೇಶ್ ಅಂಬಾನಿ ತಮ್ಮ ಜಿಯೋ ರೈಲ್ ಆಪ್ ಆರಂಭಿಸಿದ್ದಾರೆ.Jio Rail App ಸಹಾಯದಿಂದ ಜನರು ಕನ್ಫರ್ಮ್ ರೈಲು ಟಿಕೆಟ್‌ಗಳನ್ನು ಬುಕ್ ಮಾಡುವುದು ಸಾಧ್ಯವಾಗುತ್ತದೆ.

ಜಿಯೋದಿಂದ ರೈಲು ಟಿಕೆಟ್ ಬುಕಿಂಗ್ : 
ಜಿಯೋ ತನ್ನ ಬಳಕೆದಾರರಿಗೆ ವಿವಿಧ ರೀತಿಯ ಸೇವೆಗಳನ್ನು ಒದಗಿಸುತ್ತದೆ.ಈ ಸೇವೆಗಳಲ್ಲಿ ಒಂದು ಕನ್ಫರ್ಮ್ ರೈಲು ಟಿಕೆಟ್‌ ಬುಕಿಂಗ್‌.ಇಂದು Jio ಸಹಾಯದಿಂದ ಕನ್ಫರ್ಮ್ ರೈಲು ಟಿಕೆಟ್‌ಗಳನ್ನು ಬುಕ್ ಮಾಡಬಹುದು.2019 ರಲ್ಲಿ, ಕಂಪನಿಯು ಜಿಯೋ ರೈಲ್ ಅಪ್ಲಿಕೇಶನ್ ಅನ್ನು ಪ್ರಾರಂಭಿಸಿತು.ಈ ಅಪ್ಲಿಕೇಶನ್‌ನ ಸಹಾಯದಿಂದ,ಕನ್ಫರ್ಮ್ ರೈಲು ಟಿಕೆಟ್‌ಗಳನ್ನು ಪಡೆಯುವುದು ಸಾಧ್ಯವಾಗುತ್ತದೆ. ಆದರೆ ಜಿಯೋ ಫೋನ್ ಬಳಕೆದಾರರು ಮಾತ್ರ ಈ ಅಪ್ಲಿಕೇಶನ್ ಅನ್ನು ಬಳಸಬಹುದು.IRCTC ಸಹಯೋಗದೊಂದಿಗೆ Jio ರೈಲ್ ಅಪ್ಲಿಕೇಶನ್ ಕನ್ಫರ್ಮ್ ರೈಲು ಟಿಕೆಟ್‌ಗಳನ್ನು ಪಡೆಯಲು ಜನರಿಗೆ ಸಹಾಯ ಮಾಡುತ್ತದೆ.ಈ ಆ್ಯಪ್‌ನ ಸಹಾಯದಿಂದ ನೀವು ಆನ್‌ಲೈನ್‌ನಲ್ಲಿ ರೈಲು ಟಿಕೆಟ್‌ಗಳನ್ನು ಬುಕ್ ಮಾಡಬಹುದು.

Jio ರೈಲ್ ಅಪ್ಲಿಕೇಶನ್ ಅನ್ನು Jio ಫೋನ್ ಬಳಕೆದಾರರು ಮಾತ್ರ ಬಳಸಬಹುದು.ಈ ಆ್ಯಪ್ ನಲ್ಲಿ ಹಲವು ವಿಶೇಷ ಸೌಲಭ್ಯಗಳನ್ನು ಕೂಡಾ ಒದಗಿಸಲಾಗಿದೆ.ಅತ್ಯಂತ ಮುಖ್ಯವಾದ ವಿಷಯವೆಂದರೆ ಟಿಕೆಟ್ ಬುಕಿಂಗ್ ಗಾಗಿ ಬೇರೆ ಯಾವುದೇ ಸ್ಥಳಕ್ಕೆ ಹೋಗಬೇಕಾಗಿಲ್ಲ.ಈ ಅಪ್ಲಿಕೇಶನ್‌ನಲ್ಲಿಯೇ ಎಲ್ಲಾ ಸೌಲಭ್ಯ ಸಿಗುತ್ತದೆ.ಇದು ಟಿಕೆಟ್ ಬುಕ್‌ನಿಂದ PNR ಸ್ಥಿತಿಯವರೆಗೆ ಎಲ್ಲವನ್ನೂ ಒಳಗೊಂಡಿರುತ್ತದೆ.ಜಿಯೋ ಈ ಅಪ್ಲಿಕೇಶನ್‌ಗೆ ಸಂಬಂಧಿಸಿದಂತೆ IRCTC ಯೊಂದಿಗೆ ಕೈಜೋಡಿಸಿದೆ.

ಟಿಕೆಟ್ ಬುಕ್ ಮಾಡುವುದು ಹೇಗೆ ? : 
೧.Jio Rail App ಸಹಾಯದಿಂದ ರೈಲು ಟಿಕೆಟ್‌ಗಳನ್ನು ಬುಕ್ ಮಾಡಲು, ಮೊದಲು Jio ಫೋನ್‌ನಲ್ಲಿ ‘Jio Rail App’ಗೆ ಹೋಗಬೇಕು.
೨.ಅಪ್ಲಿಕೇಶನ್ ಓಪನ್ ಮಾಡಿ ಪ್ರಯಾಣಿಸಲು ಬಯಸುವ ನಿಲ್ದಾಣವನ್ನು ಆಯ್ಕೆಮಾಡಿ.
೩.ಪ್ರಯಾಣದ ದಿನಾಂಕವನ್ನು ಆಯ್ಕೆಮಾಡಿ ರೈಲು ಮತ್ತು ಆಸನವನ್ನು ಆಯ್ಕೆಮಾಡಿ.
೪. ಇದರ ನಂತರ,ಪಾವತಿ ಆಯ್ಕೆಯನ್ನು ಕ್ಲಿಕ್ ಮಾಡಿ, ಬುಕಿಂಗ್ ಬಟನ್ ಅನ್ನು ಒತ್ತಬೇಕಾಗುತ್ತದೆ.
೫. ಡೆಬಿಟ್ ಕಾರ್ಡ್,ಕ್ರೆಡಿಟ್ ಕಾರ್ಡ್,ಜಿಯೋ ಮನಿ ಮತ್ತು ಯುಪಿಐ ಮೂಲಕ ಆನ್‌ಲೈನ್ ಪಾವತಿ ಮಾಡುವ ಮೂಲಕ ಟಿಕೆಟ್‌ಗಳನ್ನು ಬುಕ್ ಮಾಡಬಹುದು.

ಈ ಸೇವೆಗಳು ಅಪ್ಲಿಕೇಶನ್‌ನಲ್ಲಿ ಲಭ್ಯವಿದೆ :
ರೈಲು ಟಿಕೆಟ್‌ಗಳನ್ನು ಬುಕ್ ಮಾಡುವುದರ ಹೊರತಾಗಿ,ಬಳಕೆದಾರರು ಈ ಅಪ್ಲಿಕೇಶನ್‌ನಲ್ಲಿ ಇತರ ಹಲವು ಸೌಲಭ್ಯಗಳನ್ನು ಪಡೆಯುತ್ತಾರೆ. ಈ ಆಪ್ ಸಹಾಯದಿಂದ ಪಿಎನ್ ಆರ್ ಸ್ಟೇಟಸ್, ರೈಲಿನ ಸಮಯ, ಸ್ಥಿತಿ, ಟಿಕೆಟ್ ಕ್ಯಾನ್ಸಲ್ ಮುಂತಾದ ಸೌಲಭ್ಯಗಳನ್ನು ಕೂಡಾ ಪಡೆಯಬಹುದು.

 

You May Also Like

More From Author

+ There are no comments

Add yours