Bounce Infinity E1X E-Scooter Launch: ಬೆಂಗಳೂರು ಮೂಲದ ಎಲೆಕ್ಟ್ರಿಕ್ ವಾಹನ ತಯಾರಿಕಾ ಕಂಪನಿ ಬೌನ್ಸ್ ಇನ್ಫಿನಿಟಿ ಕೈಗೆಟುಕುವ ಬೆಲೆಯಲ್ಲಿ ಮಾರುಕಟ್ಟೆಗೆ ಮತ್ತೊಂದು ಎಲೆಕ್ಟ್ರಿಕ್ ಸ್ಕೂಟರ್ (Electric Scooter) ಅನ್ನು ಪರಿಚಯಿಸಿದೆ. ಈ ಎಲೆಕ್ಟ್ರಿಕ್ ಸ್ಕೂಟರ್ಗೆ ಬೌನ್ಸ್ ಇನ್ಫಿನಿಟಿ ಇ1ಎಕ್ಸ್ ಇ-ಸ್ಕೂಟರ್ ಎಂದು ಹೆಸರಿಡಲಾಗಿದೆ.
ಬೌನ್ಸ್ ಇನ್ಫಿನಿಟಿ ಇ1ಎಕ್ಸ್ ಇ-ಸ್ಕೂಟರ್ ಬೆಲೆ:
ಬೌನ್ಸ್ ಇನ್ಫಿನಿಟಿ ಇ1ಎಕ್ಸ್ ಇ-ಸ್ಕೂಟರ್ನ (Bounce Infinity E1X E-Scooter) ಬೆಲೆ ಪೆಟ್ರೋಲ್ನಲ್ಲಿ ಚಲಿಸುವ ಸ್ಕೂಟರ್ನ ಬೆಲೆಯ ಅರ್ಧದಷ್ಟಿರಲಿದೆ ಎಂದು ಕಂಪನಿ ಹೇಳಿಕೊಂಡಿದೆ. ಈ ಸ್ಕೂಟರ್ 2 ರೂಪಾಂತರಗಳಲ್ಲಿ ಲಭ್ಯವಿದ್ದು ಸ್ಕೂಟರ್ನ ಆರಂಭಿಕ ಎಕ್ಸ್ ಶೋ ರೂಂ ಬೆಲೆ 55000 ರೂ. ಎಂದು ಕಂಪನಿ ತಿಳಿಸಿದೆ. ಹೈ ಟಾಪ್ ಸ್ಪೀಡ್ ರೂಪಾಂತರದ ಬೆಲೆ 59000 ರೂ. ಆಗಿದೆ.
ಬುಕಿಂಗ್ ವಿಧಾನ ಮತ್ತು ಲಭ್ಯತೆ:
ಕಂಪನಿ ನೀಡಿರುವ ಮಾಹಿತಿಯ ಪ್ರಕಾರ, ಕಂಪನಿಯ ವೆಬ್ಸೈಟ್ಗೆ ಭೇಟಿ ನೀಡುವ ಮೂಲಕ ನೀವು ಕೇವಲ 499 ರೂ. ಪಾವತಿಸಿ ಬೌನ್ಸ್ ಇನ್ಫಿನಿಟಿ ಇ1ಎಕ್ಸ್ ಇ-ಸ್ಕೂಟರ್ ಬುಕ್ ಮಾಡಬಹುದು. ಇದರ ವಿತರಣೆ ಜೂನ್ 2024ರಿಂದ ಪ್ರಾರಂಭವಾಗಲಿದೆ ಎಂದು ಕಂಪನಿ ಮಾಹಿತಿ ನೀಡಿದೆ.
ಬೌನ್ಸ್ ಇನ್ಫಿನಿಟಿ ಇ1ಎಕ್ಸ್ ಇ-ಸ್ಕೂಟರ್ ವಿಶೇಷತೆ:
ಬೌನ್ಸ್ ಇನ್ಫಿನಿಟಿ ಇ1ಎಕ್ಸ್ ಇ-ಸ್ಕೂಟರ್ನ ವಿಶೇಷ ವೈಶಿಷ್ಟ್ಯವೆಂದರೆ ಸ್ವಾಪ್ ಮಾಡಬಹುದಾದ ಬ್ಯಾಟರಿ, ಇದನ್ನು ದೇಶಾದ್ಯಂತ ಹರಡಿರುವ ಸ್ವಾಪ್ ಮಾಡಬಹುದಾದ ನೆಟ್ವರ್ಕ್ ಮೂಲಕ ಬಳಸಬಹುದಾಗಿದೆ.
ಎರಡು ರೂಪಾಂತರಗಳಲ್ಲಿ ಲಭ್ಯ:
ಬೌನ್ಸ್ ಇನ್ಫಿನಿಟಿ ಕಂಪನಿಯು ಇ1ಎಕ್ಸ್ ಇ-ಸ್ಕೂಟರ್ ಅನ್ನು 2 ಸ್ಪೀಡ್ ರೂಪಾಂತರಗಳಲ್ಲಿ ಪರಿಚಯಿಸಿದೆ. ಮೂಲ ರೂಪಾಂತರದ ಮೂಲ ವೇಗವು 55 kmph ಆಗಿದೆ ಮತ್ತು ಉನ್ನತ ರೂಪಾಂತರದ ವೇಗವು 65 kmph ಆಗಿದೆ. ಈ ಸ್ಕೂಟರ್ ಬಹು ಬ್ಯಾಟರಿ ಸ್ವ್ಯಾಪಿಂಗ್ ನೆಟ್ವರ್ಕ್ಗಳೊಂದಿಗೆ ಬರುತ್ತದೆ ಮತ್ತು ಏಕೀಕರಣಕ್ಕೆ ಕಡಿಮೆ ಬದಲಾವಣೆಗಳ ಅಗತ್ಯವಿದೆ. ಆದಾಗ್ಯೂ, ಕಂಪನಿಯು 92 kmph ವೇಗದ ಎಲೆಕ್ಟ್ರಿಕ್ ಸ್ಕೂಟರ್ಗಳತ್ತ ಗಮನ ಹರಿಸುತ್ತಿದೆ ಎಂದು ಹೇಳಿಕೊಂಡಿದೆ.
+ There are no comments
Add yours