ಹಮಾಸ್ ಉಗ್ರರೆಂದು ಭಾವಿಸಿ ತನ್ನ ಪ್ರಜೆಗಳನ್ನೇ ಕೊಂದ ಇಸ್ರೇಲ್‌ ಸೇನೆ!

1 min read

ಹೈಲೈಟ್ಸ್‌:

  • ಹಮಾಸ್ ವಶದಿಂದ ಹೊರಬಂದಿದ್ದ ಮೂವರು ಒತ್ತೆಯಾಳುಗಳು ಗುಂಡೇಟಿಗೆ ಬಲಿ
  • ಗಾಜಾಪಟ್ಟಿಯ ಜಾಬಾಲಿಯಾ ಮೇಲೆ ಇಸ್ರೇಲ್‌ ಪಡೆಗಳಿಂದ ವಾಯುದಾಳಿ
  • ಅಮೆರಿಕ ಎಚ್ಚರಿಕೆ ನಡುವೆಯೂ ‘ಸದ್ಯಕ್ಕೆ ದಾಳಿ ನಿಲ್ಲದು’ ಎಂದ ಪ್ರಧಾನಿ ನೆತನ್ಯಾಹು

ಟೆಲ್ ಅವಿವ್: ಹಮಾಸ್‌ ಉಗ್ರರ ಜತೆಗಿನ ಸಂಘರ್ಷದ ವೇಳೆ ಇಸ್ರೇಲ್‌ ಸೇನೆಯು ತನ್ನ ದೇಶದ ಮೂವರು ಒತ್ತೆಯಾಳುಗಳನ್ನು ಕೊಂದು ಪ್ರಮಾದ ಎಸೆದಿದೆ. ಹಮಾಸ್‌ ಉಗ್ರರ ವಶದಲ್ಲಿದ್ದ ಅಪಹೃತ ಒತ್ತೆಯಾಳುಗಳು ಉಗ್ರರಿರಬಹುದು ಎಂದು ತಪ್ಪಾಗಿ ಭಾವಿಸಿ ಸೇನೆಯು ಅವರನ್ನು ಕೊಂದಿದೆ.

”ಇದು ತಿಳಿಯದೆ ನಡೆದ ದೊಡ್ಡ ಪ್ರಮಾದ. ನಮಗೆ ನೋವಿನ ಸಂಗತಿಯಾಗಿದೆ,” ಎಂದು ಇಸ್ರೇಲ್‌ ರಕ್ಷಣಾ ಪಡೆ ವಕ್ತಾರ ಡೇನಿಯಲ್‌ ಹ್ಯಾಗರಿ ವಿಷಾದ ವ್ಯಕ್ತಪಡಿಸಿದ್ದಾರೆ. ಘಟನೆಯನ್ನು ಖಂಡಿಸಿ, ಇಸ್ರೇಲ್‌ ಪ್ರಜೆಗಳು ಟೆಲ್‌ ಅವೀವ್‌ನ ಕಿರಿಯಾ ಸೇನಾ ನೆಲೆ ಬಳಿ ಪ್ರತಿಭಟನೆ ನಡೆಸಿದ್ದಾರೆ.

ಈ ಮಧ್ಯೆ, ಸೇನೆಯ ಅಚಾತುರ್ಯಕ್ಕೆ ವಿಷಾದ ವ್ಯಕ್ತಪಡಿಸಿರುವ ಪ್ರಧಾನಿ ನೆತನ್ಯಾಹು, ”ಯುದ್ಧದ ಸಂದರ್ಭದಲ್ಲಿ ಇಂಥ ಸಾವುಗಳು ನಡೆಯುವುದು ಸಾಮಾನ್ಯ,” ಎಂದಿದ್ದಾರೆ. ಸಾವಿಗೀಡಾದ ಮೂವರು ಇಸ್ರೇಲಿ ಒತ್ತೆಯಾಳುಗಳನ್ನು ಯೋತಮ್‌ ಹೈಮ್, ಸರ್ಮ ತಲಲ್ಕಾ ಮತ್ತು ಅಲೋನ್‌ ಶಮ್ರಿಜ್‌ ಎಂದು ಗುರುತಿಸಲಾಗಿದೆ. ಈ ಮೂವರೂ ಅಕ್ಟೋಬರ್‌ 7ರಿಂದ ಹಮಾಸ್‌ ಉಗ್ರರ ವಶದಲ್ಲಿದ್ದರು.

You May Also Like

More From Author

+ There are no comments

Add yours