IPL 2024 Auction: ನಾಳೆ ಐಪಿಎಲ್‌ ಹರಾಜು, ಎಷ್ಟು ಗಂಟೆಗೆ? ಲೈವ್‌ ವೀಕ್ಷಣೆ ಎಲ್ಲಿ? ಇಲ್ಲಿದೆ ವಿವರ

1 min read

ಐಪಿಎಲ್ 2024 ಕಾವು ನಿಧಾನವಾಗಿ ದಿನೇ ದಿನೇ ಹೆಚ್ಚುತ್ತಿದೆ. ಇದರ ಬಾಗವಾಗಿ ಡಿಸೆಂಬರ್‌ 19ರಂದು ಐಪಿಎಲ್‌ ಮಿನಿ ಹರಾಜು (IPL 2024 Auction) ನಡೆಯಲಿದೆ. ಎಲ್ಲಾ ಫ್ರಾಂಚೈಸಿಗಳು ಕೆಲವು ಆಟಗಾರರನ್ನು ಉಳಿಸಿಕೊಂಡಿವೆ ಮತ್ತು ಇತರರನ್ನು ಬಿಡುಗಡೆ ಮಾಡಿದೆ. ಇತ್ತೀಚಿನ ಐಪಿಎಲ್ ಆಕ್ಷನ್ ಬಗ್ಗೆ ಸಂಪೂರ್ಣ ವಿವರಗಳನ್ನು ನೋಡೋಣ ಬನ್ನಿ. 2024 ರ ಐಪಿಎಲ್ ಹರಾಜಿಗಾಗಿ ಆಟಗಾರರ ನೋಂದಣಿ ಪ್ರಕ್ರಿಯೆಯು 30 ನವೆಂಬರ್ 2023 ರಂದು ಕೊನೆಗೊಂಡಿತು. ಒಟ್ಟು 333 ಕ್ರಿಕೆಟಿಗರು ಹರಾಜಿನ ಅಂತಿಮ ಲಿಸ್ಟ್‌ಗೆ ತಲುಪಿದ್ದಾರೆ. ಈ ಬಾರಿಯ ಐಪಿಎಲ್ ಹರಾಜು ದುಬೈನಲ್ಲಿ ನಡೆಯುತ್ತಿದೆ. ಹರಾಜು ಡಿಸೆಂಬರ್ 19 ರಂದು ದುಬೈನ ಕೋಕಾ-ಕೋಲಾ ಅರೆನಾದಲ್ಲಿ ನಡೆಯಲಿದೆ. ಈ ಮಿನಿ ಹರಾಜಿನ ಸಂಪೂರ್ಣ ವಿವರ ಇಲ್ಲಿದೆ ನೋಡಿ.

 

ಐಪಿಎಲ್‌ 2024 ಹರಾಜಿನ ಸಂಪೂರ್ಣ ವಿವರ:

ಐಪಿಎಲ್ 2024 ಹರಾಜು ಯಾವಾಗ?
ಐಪಿಎಲ್ ಮಿನಿ ಹರಾಜು 2024 ಡಿಸೆಂಬರ್‌ 19ರಂದು ನಡೆಯಲಿದೆ.

ಐಪಿಎಲ್ ಹರಾಜು ಎಲ್ಲಿ ನಡೆಯಲಿದೆ?
ಐಪಿಎಲ್ 2024ರ ಮಿನಿ ಹರಾಜು ಐಪಿಎಲ್ ಇತಿಹಾಸದಲ್ಲಿ ಭಾರತದ ಹೊರಗೆ ಹರಾಜು ನಡೆಯುತ್ತಿದೆ. ದುಬೈನ ಕೋಕಾ-ಕೋಲಾ ಅರೆನಾದಲ್ಲಿ ಈ ಹಾರಜು ನಡೆಯಲಿದೆ.

ಐಪಿಎಲ್ 2024 ಹರಾಜು ಎಷ್ಟು ಗಂಟೆಗೆ ಆರಂಭವಾಗಲಿದೆ?
ಐಪಿಎಲ್ 2024ರ ಹರಾಜು ದುಬೈ ಸಮಯದ ಪ್ರಕಾರ 11:30 AMಕ್ಕೆ ಪ್ರಾರಂಭವಾಗುತ್ತದೆ. ಆದರೆ ಭಾರತೀಯ ಕಾಲಮಾನದ ಪ್ರಕಾರ ಮಧ್ಯಾಹ್ನ 1 ಗಂಟೆಗೆ ಶುರುವಾಗಲಿದೆ.

ಐಪಿಎಲ್ 2024 ಹರಾಜಿನ ಲೈವ್‌ ಹೇಗೆ ನೋಡಬೇಕು?
ಐಪಿಎಲ್ 2024ರ ಹರಾಜಿನ ಲೈವ್ ಸ್ಟ್ರೀಮಿಂಗ್ JioCinema ನಲ್ಲಿ ಅಪ್ಲಿಕೇಶನ್‌ನಲ್ಲಿ ನೋಡಬಹುದು. ಇನ್ನು, ನೇರಪ್ರಸಾರವನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ನೋಡಬಹುದು.

ಫ್ರಾಂಚೈಸಿ ಬಳಿ ಉಳಿದಿರುವ ಒಟ್ಟು ಹಣ ಎಷ್ಟು?
ಗುಜರಾತ್ ಟೈಟಾನ್ಸ್: 38.15 ಕೋಟಿ, ಸನ್ ರೈಸರ್ಸ್ ಹೈದರಾಬಾದ್: 34 ಕೋಟಿ, ಕೋಲ್ಕತ್ತಾ ನೈಟ್ ರೈಡರ್ಸ್: 32.7 ಕೋಟಿ, ಚೆನ್ನೈ ಸೂಪರ್ ಕಿಂಗ್ಸ್: 31.4 ಕೋಟಿ, ಪಂಜಾಬ್ ಕಿಂಗ್ಸ್: 29.1 ಕೋಟಿ, ಡೆಲ್ಲಿ ಕ್ಯಾಪಿಟಲ್ಸ್: 28.95 ಕೋಟಿ, ಆರ್‌ಸಿಬಿ: 23.25 ಕೋಟಿ, ಮುಂಬೈ ಇಂಡಿಯನ್ಸ್: 17.75 ಕೋಟಿ, ರಾಜಸ್ಥಾನ್ ರಾಯಲ್ಸ್: 14.5 ಕೋಟಿ ಮತ್ತು ಲಕ್ನೋ ಸೂಪರ್‌ಜೈಂಟ್ಸ್: 13.15 ಕೋಟಿ.

 

ಎಷ್ಟು ಸ್ಲಾಟ್‌ಗಳು ಖಾಲಿ ಇವೆ?
ಗುಜರಾತ್ ಟೈಟಾನ್ಸ್: 8 ಸ್ಲಾಟ್‌ಗಳಲ್ಲಿ ಇಬ್ಬರು ವಿದೇಶಿ ಆಟಗಾರರು, ಸನ್‌ರೈಸರ್ಸ್ ಹೈದರಾಬಾದ್: 6 ಸ್ಲಾಟ್‌ಗಳು ಖಾಲಿ ಇದ್ದು, ಮೂವರು ವಿದೇಶಿಗರು ಲಭ್ಯವಿದ್ದಾರೆ. ಕೋಲ್ಕತ್ತಾ ನೈಟ್ ರೈಡರ್ಸ್ 4 ಸಾಗರೋತ್ತರ ಸ್ಲಾಟ್‌ಗಳು ಸೇರಿದಂತೆ 12 ಸ್ಲಾಟ್‌ಗಳು, ಚೆನ್ನೈ ಸೂಪರ್ ಕಿಂಗ್ಸ್‌ಗೆ ಸ್ಲಾಟ್‌ಗಳು 6 ಮತ್ತು 3 ಸಾಗರೋತ್ತರ ಸ್ಲಾಟ್‌ಗಳು ಖಾಲಿ ಇದೆ. ಪಂಜಾಬ್ ಕಿಂಗ್ಸ್ ಬಳಿ 8 ಸ್ಲಾಟ್‌‌ನಲ್ಲಿ 2 ವಿದೇಶಿ ಆಟಗಾರರನ್ನು ಖರಿದಿಸಬಹುದು.

ದೆಹಲಿ ಕ್ಯಾಪಿಟಲ್ಸ್ 4 ಸಾಗರೋತ್ತರ ಸ್ಲಾಟ್‌ಗಳಿಗೆ 9 ಸ್ಲಾಟ್‌ಗಳು, RCB ಬಳಿ 6 ಲಭ್ಯವಿರುವ ಸ್ಲಾಟ್‌ಗಳು, ಸಾಗರೋತ್ತರ ಸ್ಲಾಟ್‌ಗಳು 3, ಮುಂಬೈ ಇಂಡಿಯನ್ಸ್‌ಗೆ ಲಭ್ಯವಿರುವ ಸ್ಲಾಟ್‌ಗಳು 8, ಸಾಗರೋತ್ತರ ಸ್ಲಾಟ್‌ಗಳು 4, ರಾಜಸ್ಥಾನ್ ರಾಯಲ್ಸ್ 3 ಸಾಗರೋತ್ತರ ಸ್ಲಾಟ್‌ಗಳಿಗೆ 8 ಲಭ್ಯವಿರುವ ಸ್ಲಾಟ್‌ಗಳು, ಲಕ್ನೋ ಸೂಪರ್ ಜೈಂಟ್ಸ್ ಗಾಗಿ ಲಭ್ಯವಿರುವ ಸ್ಲಾಟ್‌ಗಳು 6, ಸಾಗರೋತ್ತರ ಸ್ಲಾಟ್‌ಗಳು 2 ಇದೆ.

 

You May Also Like

More From Author

+ There are no comments

Add yours