ದುಬೈನಲ್ಲಿ ಕಾಟೇರ ಹೌಸ್‌ಫುಲ್: ಅನಿವಾಸಿ ಕನ್ನಡಿಗರನ್ನು ಭೇಟಿಯಾದ ದರ್ಶನ್!

1 min read

Challenging Star Darshan At Dubai:ಚಂದನವನದ ಚಾಲೆಂಜಿಂಗ್ ಸ್ಟಾರ್​ ದರ್ಶನ್ ನಟನೆಯ ಕಾಟೇರ ಚಿತ್ರಕ್ಕೆ ಭರ್ಜರಿ ಓಪನಿಂಗ್ ಸಿಕ್ಕಿ, ಬಳಿಕ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್ ಮಾಡ್ತಿದೆ. ಸಾಲು ಸಾಲು ಚಿತ್ರಗಳನ್ನು ಸೋತ ಬಳಿಕ ದರ್ಶನ್​  ಹಿಟ್ ಸಿನಿಮಾ ನೀಡಿ, ಕಾಟೇರ  ನೋಡಿದ ಪ್ರೇಕ್ಷಕರು ಇದು ದರ್ಶನ್​ ದಿ ಬೆಸ್ಟ್ ಚಿತ್ರ ಎನ್ನುತ್ತಿದ್ದಾರೆ. ಕಾಟೇರ ಕಥೆ ಪ್ರೇಕ್ಷಕರ ಮನಗೆದ್ದಿದ್ದು, ​ಗಲ್ಲಾ ಪೆಟ್ಟಿಗೆಯಲ್ಲಿ ಕಾಟೇರ ಕೋಟಿ ಕೋಟಿ ಕೊಳ್ಳೆ ಹೊಡೆಯುತ್ತಾಯಿದೆ.

ಹೌದು.. ಕಾಟೇರ ಸಿನಿಮಾ ದಾಖಲೆ ಮೇಲೆ ದಾಖಲೆ ಮಾಡುತ್ತಿದ್ದು, ಚಿತ್ರ ರಿಲೀಸ್ ಆದಾಗನಿಂದಲೂ ದಾಖಲೆ ಮಟ್ಟಕ್ಕೆ ಟಿಕೆಟ್ ಬುಕಿಂಗ್ ಕೂಡ ಆಗಿವೆ. ಸದ್ಯ ಈ ಚಿತ್ರ ಮೊದಲ ದಿನದಿಂದ ಹಿಡಿದು 7 ನೇ ದಿನದವರೆಗೂ ಕಲೆಕ್ಷನ್ ವಿಚಾರದಲ್ಲಿ ಡ್ರಾಪ್ ಆಗದೆ ಕೋಟಿ ಲೆಕ್ಕ ದಾಖಲೆ ಮಾಡಿದೆ. ಅಷ್ಟೊಂದು ಕ್ರೇಜ್  ಇರೋ ಈ ಚಿತ್ರ ಇದೀಗ 100 ಕೋಟಿ ಕ್ಲಬ್ ಸೇರಿಕೊಂಡಿದೆ.

ಕಾಟೇರ ಸಿನಿಮಾ ಕನ್ನಡಿಗರ ಮೆಚ್ಚುಗೆಯನ್ನ ಪಡೆಯುತ್ತಿರೋ ಕಾಟೇರ ದಿನೇ ದಿನೇ ತನ್ನ ರಿಲೀಸ್ ವಿಸ್ತರಿಸುತ್ತಿದ್ದು, ನೆರೆ ರಾಜ್ಯಗಳಲ್ಲೂ ಬೇಡಿಕೆ ಹೆಚ್ಚಿದೆ. ಇದೀಗ ಬೇರೆ ಬೇರೆ ದೇಶಗಳಲ್ಲೂ ಡಿ-ಬಾಸ್ ಚಿತ್ರ ರಿಲೀಸ್ ಆಗಿದ್ದು, ಜನವರಿ-4 ರಂದು ಕತಾರ್ ಮತ್ತು ಆಸ್ಟ್ರೇಲಿಯಾದಲ್ಲಿ ರಿಲೀಸ್ ಆಗಿದೆ. ಜನವರಿ-5 ರಂದು ಅಮೆರಿಕಾದಲ್ಲಿ ಕನ್ನಡದ ಕಾಟೇರ ತೆರೆ ಕಂಡಿದೆ. ‌

ಕಾಟೇರ ಸಿನಿಮಾ ರಿಲೀಸ್ ಆಗಿ ಒಂದು ವಾರ ಅಷ್ಟೆ ಕಳೆದಿದ್ದು, ಆದರೆ ಅಷ್ಟರಲ್ಲಿಯೇ ಟಿಕೆಟ್ ಬುಕಿಂಗ್, ಕಲೆಕ್ಷನ್, ಥಿಯೇಟರ್ ಅಬ್ಬರ ಹೀಗೆ ಎಲ್ಲರದಲ್ಲೂ ಗಮನ ಸೆಳೆದಿದೆ. ಈ ದಾಖಲೆಯ ನಡುವೆ ಕಾಟೇರ ಇದೀಗ ವಿದೇಶಕ್ಕೂ ಕಾಲಿಟ್ಟಿದೆ. ದುಬೈನಲ್ಲಿ ‘ಕಾಟೇರ’ ಸಿನಿಮಾ ಪ್ರದರ್ಶನಗೊಳ್ಳುತ್ತಿದ್ದ ಕಾರಣ, ದರ್ಶನ್​ ದುಬೈಗೆ ತೆರಳಿ, ಅನಿವಾಸಿ ಕನ್ನಡಿಗರನ್ನು ಭೇಟಿ ಮಾಡಿ​ ಚಿತ್ರದ ಪ್ರಚಾರ ಮಾಡಿದ್ದಾರೆ.

You May Also Like

More From Author

+ There are no comments

Add yours