ಸರ್ಕಾರಿ ನೌಕರರಿಗೆ, ಪಿಂಚಣಿದಾರರಿಗೆ ಡಬಲ್ ಜಾಕ್ ಪಾಟ್: ಡಿಎ ಜೊತೆಗೆ ಕೈ ಸೇರಲಿದೆ 18 ತಿಂಗಳ ಡಿಎ ಅರಿಯರ್ಸ್ !

1 /7

ಕೇಂದ್ರ ಸರ್ಕಾರಿ ನೌಕರರಿಗೆ ಶೇ 4ರಷ್ಟು  ತುಟ್ಟಿಭತ್ಯೆ ಹೆಚ್ಚಳವಾಗಲಿದೆ.ಇದರಿಂದ ಒಂದು ಕೋಟಿಗೂ ಹೆಚ್ಚು ನೌಕರರು ಮತ್ತು ಪಿಂಚಣಿದಾರರಿಗೆ ಭಾರೀ ಪರಿಹಾರ ದೊರೆಯಲಿದೆ.

2 /7

ಇತ್ತೀಚೆಗೆ ಬಿಡುಗಡೆಯಾದ ಎಐಸಿಪಿಐ ಸೂಚ್ಯಂಕ ಸಂಖ್ಯೆಗಳು ತುಟ್ಟಿಭತ್ಯೆಯಲ್ಲಿ ಶೇಕಡಾ ನಾಲ್ಕರಷ್ಟು ಏರಿಕೆಯನ್ನು ಸೂಚಿಸಿವೆ. ಪ್ರಸ್ತುತ, ನೌಕರರು ಶೇಕಡಾ 46 ರಷ್ಟು  ಡಿಎ  ಪಡೆಯುತ್ತಿದ್ದಾರೆ

3 /7

ತುಟ್ಟಿಭತ್ಯೆಯಲ್ಲಿ ಆಗುವ ಶೇಕಡಾ ನಾಲ್ಕು ಹೆಚ್ಚಳವು ನೌಕರರ ಒಟ್ಟು ತುಟ್ಟಿ ಭತ್ಯೆಯನ್ನು ಶೇಕಡಾ 50ಕ್ಕೆ ಹೆಚ್ಚಿಸುತ್ತದೆ

4 /7

ಇದಲ್ಲದೆ, ಕೊರೊನಾ ಸಾಂಕ್ರಾಮಿಕ ಸಮಯದಲ್ಲಿ ಸ್ಥಗಿತಗೊಂಡಿದ್ದ 18 ತಿಂಗಳ ಡಿಎ ಬಾಕಿಯನ್ನು ಸರ್ಕಾರ ಶೀಘ್ರದಲ್ಲೇ ಬಿಡುಗಡೆ ಮಾಡಲಿದೆ. ಅದಕ್ಕಾಗಿ ಅಧಿಸೂಚನೆಯನ್ನು ಹೊರಡಿಸಲಿದೆ ಎಂದು ಮೂಲಗಳು ಹೇಳುತ್ತವೆ.

5 /7

ಕರೋನಾ ಸಾಂಕ್ರಾಮಿಕ ಸಮಯದಲ್ಲಿ  ಜನವರಿ 1, 2020 ರಿಂದ ಜೂನ್ 30, 2021 ರವರೆಗಿನ ತುಟ್ಟಿಭತ್ಯೆಯನ್ನು ತಡೆಹಿಡಿಯಲಾಗಿತ್ತು. ನಂತರ ಪರಿಸ್ಥಿತಿ ಸ್ವಲ್ಪ ಸುಧಾರಿಸಿದ ನಂತರ ತುಟ್ಟಿಭತ್ಯೆಯನ್ನು ಮತ್ತೆ ಆರಂಭಿಸಲಾಯಿತು.

6 /7

ಆದರೆ, ಸ್ಥಗಿತಗೊಳಿಸಿದ್ದ 18 ತಿಂಗಳ ಮೊತ್ತವನ್ನು ಇನ್ನೂ ನೌಕರರಿಗೆ ಪಾವತಿಸಿಲ್ಲ. ಸರ್ಕಾರ ಈಗ ಆ ಬಾಕಿ ಡಿಎಯನ್ನು ಬಿಡುಗಡೆ ಮಾಡಬಹುದು ಎನ್ನಲಾಗಿದೆ.

7 /7

ಆದರೆ, ಈ ಬಗ್ಗೆ ಸರ್ಕಾರ ಇನ್ನೂ ಅಧಿಕೃತ ಅಧಿಸೂಚನೆಯನ್ನು ಬಿಡುಗಡೆ ಮಾಡಿಲ್ಲ.

You May Also Like

More From Author

+ There are no comments

Add yours