
ಬಾಲಿವುಡ್ ನಟಿ ರಶ್ಮಿಕಾ ಮಂದಣ್ಣ ಅವರು ಸದ್ಯ ಎಲ್ಲಾ ಭಾಷೆಗಳಲ್ಲಿಯೂ ಬಹಳ ಬೇಡಿಕೆಯ ನಟಿ. ಮುಟ್ಟಿದ್ದೆಲ್ಲ ಚಿನ್ನ ಎನ್ನುವಂತೆ ಈ ಕಿರಿಕ್ ಚೆಲುವೆ ಮಾಡಿದ ಮೂವಿಗಳೆಲ್ಲಾ ಬ್ಲಾಕ್ ಬಸ್ಟರ್ ಹಿಟ್ ಎನಿಸಿಕೊಂಡಿವೆ. ಇವುಗಳ ಪೈಕಿ ಅನಿಮಲ್ ಬಿಗ್ ಹಿಟ್ ಆಗಿತ್ತು. ಮಕಾಡೆ ಮಲಗಿದ್ದ ಬಾಲಿವುಡ್ಗೆ ಹಿಟ್ ಕೊಟ್ಟಿದ್ದು ರಶ್ಮಿಕಾ ಮಂದಣ್ಣ.

ಇದೀಗ ಎಕ್ಸೈಟಿಂಗ್ ಸುದ್ದಿಯೊಂದು ಹೊರಬಿದ್ದಿದ್ದು ಇದನ್ನು ಕೇಳಿದ ರಶ್ಮಿಕಾ ಫ್ಯಾನ್ಸ್ ನಿಜಕ್ಕೂ ಥ್ರಿಲ್ ಆಗಿದ್ದಾರೆ. ಹೌದು ನಟಿ ರಶ್ಮಿಕಾ ಮಂದಣ್ಣ ಅವರು ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ಸಿನಿಮಾದಲ್ಲಿ ನಟಿಸಲಿದ್ದಾರಂತೆ. ಬಾಲಿವುಡ್ ಭಾಯಿಜಾನ್ಗೆ ರಶ್ಮಿಕಾ ಜೋಡಿಯಾಗಲಿದ್ದಾರೆ.

ಎ.ಆರ್ ಮುರುಗದಾಸ್ ನಿರ್ದೇಶನದ ಸಲ್ಮಾನ್ ಖಾನ್ ಅವರ ಮುಂದಿನ ಸಿನಿಮಾ ಸಿಕಂದರ್ನಲ್ಲಿ ರಶ್ಮಿಕಾ ಮಂದಣ್ಣ ಅವರು ಭಾಯಿಜಾನ್ಗೆ ಜೋಡಿಯಾಗಲಿದ್ದಾರೆ. ಸಾಜಿದ್ ನಾಡಿಯವಾಲಾ ಅವರ ಈ ಸಿನಿಮಾ 2025ರ ಈದ್ಗೆ ದೊಟ್ಟಮಟ್ಟದಲ್ಲಿ ರಿಲೀಸ್ ಆಗಲಿದೆ. ಈ ಕುರಿತು ರಮೇಶ್ ಬಾಲಾ ಟ್ವೀಟ್ ಮಾಡಿದ್ದಾರೆ.

ಸಲ್ಮಾನ್ ಖಾನ್ ಅವರ ಮೂವಿಗಳು ಇತ್ತೀಚೆಗೆ ಅಷ್ಟಾಗಿ ಹಿಟ್ ಎನಿಸಿಕೊಂಡಿಲ್ಲ. ಸಲ್ಮಾನ್ ಖಾನ್ ಅವರು ಸತತ ಸಿನಿಮಾಗಳನ್ನು ಮಾಡುತ್ತಿದ್ದರೂ ಕೂಡಾ ಯಾವುದೂ ಹಿಟ್ ಆಗಲಿಲ್ಲ. ಈ ಸಂದರ್ಭ ಅವರು ಸೌತ್ ನಿರ್ದೇಶಕರ ಜೊತೆ ಸಿನಿಮಾ ಮಾಡುತ್ತಾರೆ ಎನ್ನುವ ಸುದ್ದಿ ವೈರಲ್ ಆಗಿತ್ತು.

ಸಲ್ಮಾನ್ ಖಾನ್ ಅವರು ಕಾಲಿವುಡ್ ಡೈರೆಕ್ಟರ್ ಜೊತೆ ಸಿನಿಮಾ ಮಾಡುತ್ತಾರೆ ಎನ್ನುವ ಸುದ್ದಿ ಸ್ವಲ್ಪ ಹಿಂದಿನಿಂದಲೇ ವೈರಲ್ ಆಗಿತ್ತು. ಆದರೆ ಈ ಸಿನಿಮಾ ಹೀರೋಯಿನ್ ಯಾರಾಗುತ್ತಾರೆ ಎನ್ನುವುದು ಪಕ್ಕಾ ಕನ್ಫರ್ಮ್ ಆಗಿರಲಿಲ್ಲ. ಆದರೆ ತಮ್ಮ ಸಿನಿಮಾಗಳು ಸತತ ಫ್ಲಾಪ್ ಆದ ಕಾರಣವೇ ಸಲ್ಮಾನ್ ಖಾನ್ ಸೌತ್ ನಿರ್ದೇಶಕರ ಮೊರೆ ಹೋಗಿದ್ದಾರೆ.

ಸಲ್ಮಾನ್ ಖಾನ್ ಅವರ ಸಿನಿಮಾಗೆ ಪೊನ್ನಿಯಿನ್ ಸೆಲ್ವನ್ ನಟಿ ತ್ರಿಶಾ ಅವರು ಹೀರೋಯಿನ್ ಎಂದು ಹೇಳಲಾಗಿ್ತತು. ಇದು ಬಹುತೇಕ ಪಕ್ಕಾ ಎನ್ನಲಾಗಿತ್ತು. ಕಾರಣ ಲಿಯೋ ಸಿನಿಮಾದಲ್ಲಿಯೂ ತ್ರಿಶಾ ಅಭಿನಯಕ್ಕೆ ಮೆಚ್ಚುಗೆ ವ್ಯಕ್ತವಾಗಿತ್ತು. ಈಗ ಅವರು ವಿಶ್ವಂಭರ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

ಸದ್ಯ ಸಲ್ಮಾನ್ ಖಾನ್ ಅವರ ಜೊತೆ ರಶ್ಮಿಕಾ ಮಂದಣ್ಣ ಸಿಕಂದರ್ನಲ್ಲಿ ನಟಿಸುವುದು ಪಕ್ಕಾ ಆಗಿದೆ. ಇಂಡಸ್ಟ್ರಿ ಎಕ್ಸ್ಪರ್ಟ್ ತರಣ್ ಆದರ್ಶ್ ಅವರೂ ಇದೇ ವಿಚಾರವನ್ನು ಟ್ವೀಟ್ ಮಾಡಿದ್ದಾರೆ. ಅಂತೂ ರಶ್ಮಿಕಾ ಬಾಲಿವುಡ್ನ ಮೂವರು ಖಾನ್ಗಳಲ್ಲಿ ಒಬ್ಬರ ಜೊತೆ ಸಿನಿಮಾ ಮಾಡೋಕೆ ಸಿದ್ದರಾಗಿದ್ದಾರೆ.

ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಬಾಲಿವುಡ್ ಸಿನಿಮಾ ಅನಿಮಲ್ನಲ್ಲಿ ರಣಬೀರ್ ಕಪೂರ್ ಅವರಿಗೆ ರಶ್ಮಿಕಾ ಮಂದಣ್ಣ ಜೋಡಿಯಾಗಿದ್ದರು. ಈ ಸಿನಿಮಾ ರಣಬೀರ್ ಅವರ ಕೆರಿಯರ್ ಹಿಟ್ ಎನಿಸಿಕೊಂಡಿತು. ಸಾವಿರಾರು ಕೋಟಿ ಬಾಚಿಕೊಂಡು ಭರ್ಜರಿ ಲಾಭ ಮಾಡಿತು. ಈಗ ನಟಿ ಸಲ್ಮಾನ್ ಖಾನ್ ಜೊತೆ ಮತ್ತೊಂದು ಬಾಲಿವುಡ್ ಮೂವಿಗೆ ರೆಡಿಯಾಗಿದ್ದಾರೆ.

ನಟಿಯ ಜನ್ಮದಿನಂದು ಅವರು ಸದ್ಯ ಶೂಟಿಂಗ್ ಮಾಡುತ್ತಿರುವ ಸಿನಿಮಾಗಳ ತಂಡ ಅವರ ಫಸ್ಟ್ ಲುಕ್ ರಿಲೀಸ್ ಮಾಡಿವೆ. ಮುಖ್ಯವಾಗಿ ಹಲವು ತಿಂಗಳಿಂದ ಸುದ್ದಿ ಮಾಡಿದ್ದ ಗರ್ಲ್ಫ್ರೆಂಡ್ ಸಿನಿಮಾದ ಫಸ್ಟ್ ಲುಕ್ ಈಗ ರಿಲೀಸ್ ಆಗಿತ್ತು. ಅವರ ಹೊಸ ಪ್ರಾಜೆಕ್ಟ್ ದಿ ಗರ್ಲ್ಫ್ರೆಂಡ್ನ ತಯಾರಕರು ತಮ್ಮ ಸೋಷಿಯಲ್ ಮೀಡಿಯಾ ಪ್ಲಾಟ್ಫಾರ್ಮ್ ಟ್ವಿಟರ್ ಹಾಗೂ ಇನ್ಸ್ಟಾಗ್ರಾಮ್ನಲ್ಲಿ ನಟಿಯ ಮುಂಬರುವ ಸಿನಿಮಾದ ಫಸ್ಟ್ ಲುಕ್ ಶೇರ್ ಮಾಡಿಕೊಂಡಿದ್ದರು.

ನಟಿ ರಶ್ಮಿಕಾ ಅವರು ಸಿನಿಮಾಗಳನ್ನು ಮಾಡುವುದರಲ್ಲಿ ಬ್ಯುಸಿಯಾಗಿದ್ದಾರೆ. ಅವರಿಗೆ ಸಾಲು ಸಾಲು ಸಿನಿಮಾ ಆಫರ್ಗಳು ಬರುತ್ತಿವೆ. ಅಷ್ಟೇ ಅಲ್ಲದೆ ನಟಿ ತಮ್ಮ ಸಿನಿ ಕೆರಿಯರ್ ಪೀಕ್ನಲ್ಲಿದ್ದು ಒಳ್ಳೊಳ್ಳೆಯ ಸಿನಿಮಾಗಳನ್ನು ಮಾಡುತ್ತಿದ್ದಾರೆ. ಅವರ ಸಿನಿಮಾಗಳು ಸಕ್ಸಸ್ ಆಗುತ್ತಿರುವ ಕಾರಣ ಅವರ ಸಂಭಾವನೆ, ಖ್ಯಾತಿಯೂ ಹೆಚ್ಚಾಗಿದೆ.
+ There are no comments
Add yours