ರಾಕಿಂಗ್‌ ಸ್ಟಾರ್‌ ಯಶ್‌ ಟಾಕ್ಸಿಕ್‌ ಸಿನಿಮಾದಲ್ಲಿ ನಟಿಸಲು ಸೌತ್‌ ಸ್ಟಾರ್‌ ನಯನತಾರಾ‌ ಬೇಡಿಕೆಯಿಟ್ಟ ಸಂಭಾವನೆ ಎಷ್ಟು ಗೊತ್ತಾ?

1 min read

Nayanthara remuneration: ನಯನತಾರಾ ತಮಿಳು ಚಿತ್ರರಂಗದ ಪ್ರಮುಖ ನಟಿ. ಲೇಡಿ ಸೂಪರ್ ಸ್ಟಾರ್ ಎಂಬ ಬಿರುದು ಪಡೆದಿರುವ ನಯನತಾರಾ ಸದ್ಯ ಕಾಲಿವುಡ್ ನಿಂದ ಬಾಲಿವುಡ್ ಗೆ ಎಂಟ್ರಿಕೊಟ್ಟಿದ್ದಾರೆ.. ಕಳೆದ ವರ್ಷ ಅವರ ಹಿಂದಿ ಚೊಚ್ಚಲ ಚಿತ್ರ ಜವಾನ್ ಬಾಕ್ಸ್ ಆಫೀಸ್‌ನಲ್ಲಿ 1000 ಕೋಟಿ ರೂ.ಗಿಂತ ಹೆಚ್ಚು ಕಲೆಕ್ಷನ್ ಮಾಡಿತ್ತು. ಜವಾನ್ ಚಿತ್ರದ ಯಶಸ್ಸಿನ ನಂತರ ನಟಿ ನಯನತಾರಾ ತಮಿಳಿನ ಚಿತ್ರವೊಂದರ ಮೇಕಿಂಗ್ ನಲ್ಲಿದ್ದಾರೆ.

ಪ್ರಿನ್ಸ್ ಪಿಕ್ಚರ್ಸ್ ನಿರ್ಮಾಣದ ಈ ಚಿತ್ರವನ್ನು ಡ್ಯೂಡ್ ವಿಕ್ಕಿ ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ಯೋಗಿ ಬಾಬು ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಸದ್ಯ ಈ ಚಿತ್ರದ ಚಿತ್ರೀಕರಣ ಮುಗಿದಿದ್ದು, ಬಿಡುಗಡೆಗೆ ಸಿದ್ಧವಾಗುತ್ತಿದೆ. ಇದರ ಬೆನ್ನಲ್ಲೇ ನಯನತಾರಾ ಡಿಯರ್ ಸ್ಟೂಡೆಂಟ್ಸ್ ಎಂಬ ಮಲಯಾಳಂ ಚಿತ್ರದಲ್ಲಿಯೂ ನಟಿಸುತ್ತಿದ್ದಾರೆ. ಚಿತ್ರದಲ್ಲಿ ನಿವಿನ್ ಪೌಲಿ ಎದುರು ನಯನ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದ ಶೂಟಿಂಗ್ ಕೇರಳದಲ್ಲಿ ಆರಂಭವಾಗಿದೆ.

ಇದಲ್ಲದೇ ನಟಿ ನಯನತಾರಾ ಕೈಯಲ್ಲಿ ಮತ್ತೊಂದು ದೊಡ್ಡ ಚಿತ್ರವಿದೆ. ಅದು ಟಾಕ್ಸಿಕ್‌.. ಕೆಜಿಎಫ್ ಹೀರೋ ಯಶ್ ನಾಯಕನಾಗಿ ನಟಿಸಿರುವ ಈ ಚಿತ್ರ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತಯಾರಾಗುತ್ತಿದೆ. ಇದರಲ್ಲಿ ನಟಿಸಲು ನಟಿ ನಯನತಾರಾ ಆಯ್ಕೆಯಾಗಿದ್ದಾರೆ. ಆದರೆ ಅದು ನಾಯಕಿಯಾಗಿ ಅಲ್ಲ.. ಚಿತ್ರದಲ್ಲಿ ನಟ ಯಶ್ ಅವರ ಅಕ್ಕನ ಪಾತ್ರದಲ್ಲಿ ನಯನತಾರಾ ಕಾಣಿಸಿಕೊಳ್ಳಲಿದ್ದಾರೆ. ಸದ್ಯದಲ್ಲೇ ಈ ಬಗ್ಗೆ ಅಧಿಕೃತ ಪ್ರಕಟಣೆ ಹೊರಬೀಳುವ ನಿರೀಕ್ಷೆ ಇದೆ.

ಇದೆಲ್ಲದರ ಮಧ್ಯೆ ಟಾಕ್ಸಿಕ್ ಚಿತ್ರದಲ್ಲಿ ನಟಿಸಲು ನಟಿ ನಯನತಾರಾ ಅವರ ಸಂಭಾವನೆ ಸದ್ಯ ಕಾಲಿವುಡ್ ನಲ್ಲಿ ಹಾಟ್ ಟಾಪಿಕ್ ಆಗಿದೆ. ಸಾಮಾನ್ಯವಾಗಿ ನಾಯಕಿಯಾಗಿ ನಟಿಸಲು ಚಿತ್ರವೊಂದಕ್ಕೆ ರು.10 ಕೋಟಿ ಸಂಭಾವನೆ ಪಡೆಯುವ ನಯನತಾರಾ, ಟಾಕ್ಸಿಕ್ ಚಿತ್ರದಲ್ಲಿ ಯಶ್ ತಂಗಿಯ ಪಾತ್ರ ಮಾಡಲು ರು.20 ಕೋಟಿ ಸಂಭಾವನೆ ಕೇಳಿದ್ದಾರೆ. ಇದರೊಂದಿಗೆ ನಟಿ ನಯನತಾರಾ ತಮ್ಮ ಸಂಭಾವನೆಯನ್ನು ದುಪ್ಪಟ್ಟು ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ವರದಿಗಳ ಪ್ರಕಾರ, ಇದು ಪ್ಯಾನ್ ಇಂಡಿಯಾ ಚಿತ್ರವಾದ್ದರಿಂದ ನಯನ್ ಸಂಭಾವನೆಯಾಗಿ ಇಷ್ಟು ದೊಡ್ಡ ಮೊತ್ತವನ್ನು ಕೇಳಿರಬಹುದು.

 

You May Also Like

More From Author

+ There are no comments

Add yours