ಕೋಲ್ಕತ್ತಾಗೆ ಮೂರನೆ ಬಾರಿ ಚಾಂಪಿಯನ್ ಪಟ್ಟ

0 min read

ಚೆನ್ನೈ: 17ನೇ ಆವೃತ್ತಿಯ ಐಪಿಎಲ್ ಟ್ರೋಫಿಯನ್ನು ಕೋಲ್ಕತ್ತಾ ನೈಟ್ ರೈಡರ್ಸ್ ಗೆದ್ದುಕೊಂಡಿದ್ದು ಚಾಂಪಿಯನ್ ಆಗಿ ಹೊರ ಹೊಮ್ಮಿದೆ. ಫೈನಲ್‍ನಲ್ಲಿ ಸನ್‍ರೈಸರ್ಸ್ ವಿರುದ್ಧ 8 ವಿಕೆಟ್‍ಗಳ ಭರ್ಜರಿ ಗೆಲುವು ಸಾಧಿಸಿದೆ. ಇದರೊಂದಿಗೆ 10 ವರ್ಷಗಳ ಬಳಿಕ ಐಪಿಎಲ್ ಟ್ರೋಫಿಯನ್ನು ಮುಡಿಗೇರಿಸಿಕೊಂಡಿದ್ದು ಮೂರನೆ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದೆ.
ಚೆನ್ನೈನ ಚೆಪಾಕ್ ಅಂಗಳದಲ್ಲಿ ನಡೆದ ಐಪಿಎಲ್ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಸನ್‍ರೈಸರ್ಸ್ 18.3 ಓವರ್‍ಗಳಲ್ಲಿ 113 ರನ್ ಗಳಿಸಿತು. ಕೋಲ್ಕತ್ತಾ ತಂಡ 10.3 ಓವರ್‍ಗಳಲ್ಲಿ 2 ವಿಕೆಟ್ ನಷ್ಟಕ್ಕೆ 114 ರನ್ ಕಲೆ ಹಾಕಿತು.

114 ರನ್‍ಗಳ ಸುಲಭ ಗುರಿ ಬೆನ್ನತ್ತಿದ ಕೋಲ್ಕತ್ತಾ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಸುನಿಲ್ ನರೈನ್ (6ರನ್) ವೇಗಿ ಕಮಿನ್ಸ್‍ಗೆ ಬಲಿಯಾದರು. ರೆಹಮಾನ್‍ಹುಲ್ಲಾ ಗುರ್ಬಜ್ ಜತೆಗೂಡಿದ ವೆಂಕಟೇಶ್ ಅಯ್ಯರ್ ಎರಡನೆ ವಿಕೆಟ್‍ಗೆ 91 ರನ್ ಜತೆಯಾಟ ನೀಡಿದರು. 39 ರನ್ ಗಳಿಸಿದ್ದ ರೆಹಮಾನ್‍ಹುಲ್ಲಾ ಶಹಬಾಜ್‍ಗೆ ಬಲಿಯಾದರು. ವೆಂಕಟೇಶ್ ಅಯ್ಯರ್ 24 ಎಸೆತಗಳಲ್ಲಿ ಅರ್ಧ ಶತಕ ಹೊಡೆದರು. ನಾಯಕ ಶ್ರೇಯಸ್ ಅಯ್ಯರ್ ಅಜೇಯ 6 ರನ್ ಗಳಿಸಿದರು. ವೆಂಕಟೇಶ್ ಅಯ್ಯರ್ ಅಜೇಯ 52 ರನ್ ಗಳಿಸಿದರು. ಸನ್‍ರೈಸರ್ಸ್ ಪರ ಕಮಿನ್ಸ್ ಮತ್ತು ಶಹಬಾಜ್ ಅಹ್ಮದ್ ತಲಾ 1 ವಿಕೆಟ್ ಪಡೆದರು.
ಕೋಲ್ಕತ್ತಾ ದಾಳಿಗೆ ನಲುಗಿದ ಸನ್‍ರೈಸರ್ಸ್
ಇದಕ್ಕೂ ಮುನ್ನ ಮೊದಲು ಬ್ಯಾಟಿಂಗ್ ಮಾಡಿದ ಸನ್‍ರೈಸರ್ಸ್‍ಗೆ ವೇಗಿ ಸ್ಟಾರ್ಕ್ ಆಘಾತ ನೀಡಿದರು. ಓಪನರ್‍ಗಳಾದ ಅಭಿಷೇಕ್ ಶರ್ಮಾ (2ರನ್) ಮತ್ತು ಟ್ರಾವಿಸ್ ಹೆಡ್(0ರನ್) ಮತ್ತೊಮ್ಮೆ ಉತ್ತಮ ಆರಂಭ ನೀಡುವಲ್ಲಿ ಎಡವಿದರು. ಅಭಿಷೇಕ್ ಅವರನ್ನು ಸ್ಟಾರ್ಕ್ ಬೌಲ್ಟ್ ಮಾಡಿದರು. ಟ್ರಾವಿಸ್ ಹೆಡ್ ಅರೋರಾಗೆ ಬಲಿಯಾದರು. ರಾಹುಲ್ ತ್ರಿಪಾಠಿ ಸ್ಟಾರ್ಕ್‍ಗೆ (9ರನ್) ಬಲಿಯಾದರು.
ನಾಲ್ಕನೆ ವಿಕೆಟ್‍ಗೆ ಜತೆಗೂಡಿದ ಏಡಿನ್ ಮಾರ್ಕ್‍ರಮ್ ಮತ್ತು ನಿತೀಶ್ ಕುಮಾರ್ 26 ರನ್‍ಗಳ ಜತೆಯಾಟ ನೀಡಿ ಇನ್ನಿಂಗ್ಸ್ ಕಟ್ಟು ಪ್ರಯತ್ನ ಮಾಡಿದರು. 13 ರನ್‍ಗಳಿಸಿದ್ದ ನಿತೀಶ್ ರೆಡ್ಡಿ ಅವರು ಹರ್ಷೀತ್‍ಗೆ ಬಲಿಯಾದರು.
ಏಡಿನ್ ಮಾರ್ಕ್‍ರಮ್ (20ರನ್) ರಸೆಲ್ ಎಸೆತದಲ್ಲಿ ಸ್ಟಾರ್ಕ್‍ಗೆ ಕ್ಯಾಚ್ ನೀಡಿದರು. ನಂತರ ಬಂದ ಶಹಬಾಜ್ ಅಹ್ಮದ್ (8ರನ್), ಅಬ್ದುಲ್ ಸಮಾದ್ (4ರನ್), ನಾಯಕ ಪ್ಯಾಟ್ ಕಮಿನ್ಸ್ (24ರನ್), ಜಯದೇವ್ ಉನಾದ್ಕಟ್ 4, ಭುವನೇಶ್ವರ್ ಕುಮಾರ್ ಅಜೇಯ 0 ರನ್ ಗಳಿಸಿದರು.
ಕೋಲ್ಕತ್ತಾ ಪರ ರಸೆಲ್ 19ಕ್ಕೆ 3, ಮಿಚೆಲ್ ಸ್ಟಾರ್ಕ್ 14ಕ್ಕೆ2, ಹರ್ಷಿತ್ 24ಕ್ಕೆ 2, ವೈಭವ್ 24ಕ್ಕೆ 1, ಸುನಿಲ್ ನರೈನ್ 16ಕ್ಕೆ1, ವರುಣ್ ಚಕ್ರವರ್ತಿ 9ಕ್ಕೆ 1 ವಿಕೆಟ್ ಪಡೆದರು.

ಪ್ರಶಸ್ತಿ ಮೊತ್ತ
ಚಾಂಪಿಯನ್ ಕೋಲ್ಕತ್ತಾ: 20 ಕೋಟಿ ರೂ.
ರನ್ನರ್‍ಅಪ್ ಸನ್‍ರೈಸರ್ಸ್; 13 ಕೋಟಿ ರೂ.
ಮೂರನೆ ಸ್ಥಾನ ರಾಜಸ್ಥಾನ: 7 ಕೋಟಿ ರೂ.
ನಾಲ್ಕನೆ ಸ್ಥಾನ : ಆರ್‍ಸಬಿಗೆ 6.5 ಕೋಟಿ ರೂ.

You May Also Like

More From Author

+ There are no comments

Add yours